ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಶಿವಣ್ಣನ ನೋಡಿ ಅಭಿಮಾನಿಗಳ ‍‍ಪುಳಕ

Published 13 ಮಾರ್ಚ್ 2024, 5:26 IST
Last Updated 13 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಬೆಳಗಾವಿ: ‘ಕರಟಕ ದಮನಕ’ ಚಲನಚಿತ್ರದ ಪ್ರಚಾರಕ್ಕೆ ಇಲ್ಲಿನ ಪ್ರಕಾಶ್‌ ಚಿತ್ರಮಂದಿರಕ್ಕೆ ಮಂಗಳವಾರ ಆಗಮಿಸಿದ ನಟ ಶಿವರಾಜ್‌ಕುಮಾರ್‌ ಅವರನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು. ವಾಹನ ಇಳಿದು ಥೇಟರ್‌ನತ್ತ ಹೆಜ್ಜೆ ಹಾಕಿದ ನಟನಿಗೆ ಪುಷ್ಪವೃಷ್ಟಿ ಮಾಡಿ, ಜೈಕಾರ ಹಾಕಿದರು.

ಸುತ್ತ ಸೇರಿದ ಅಭಿಮಾನಿಗಳು ನೆಚ್ಚಿನ ನಟನ ಜತೆಗೆ ಫೋಟೊ, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನಂತರ ಶಿವರಾಜ್‌ಕುಮಾರ್ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದರು.

‘ಬೆಳಗಾವಿ ಎಂದರೆ ಕುಂದಾ ನೆನಪಾಗುತ್ತದೆ. ಇಲ್ಲಿನ ಕುಂದಾದ ಸಿಹಿ ನಮ್ಮನ್ನು ಯಾವಾಗಲೂ ಸೆಳೆಯುತ್ತದೆ. ನಮ್ಮ ತಂದೆಯವರಿಗೂ ಕುಂದಾ ಬಲು ಇಷ್ಟದ ತಿನಿಸಾಗಿತ್ತು. ಇಲ್ಲಿನ ಅಭಿಮಾನಿಗಳ ಹೃದಯವಂತಿಗೆ ಕುಂದಾದಷ್ಟೇ ಸಿಹಿ’ ಎಂದರು.

‘ಕರಟಕ ದಮನಕ ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿದೆ. ಒಂದು ಸಾಮಾಜಿಕ ಸಂದೇಶವಿದೆ. ನೀರು, ಊರು, ಊರಿನ ತೇರು ಎಷ್ಟು ಮುಖ್ಯ ಎಂಬುದನ್ನು ತಿಳಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದರು.

ಚಿತ್ರದ ನಿರ್ದೇಶಕ ಯೋಗರಾಜ ಭಟ್ ಕೂಡ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT