ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಪೂರ್ಣ, ರಮೇಶ್ ಗುಬ್ಬಿಗೆ ‘ಹರಿಹರ ಶ್ರೀ’ ಪ್ರಶಸ್ತಿ

Published 7 ಜನವರಿ 2024, 15:29 IST
Last Updated 7 ಜನವರಿ 2024, 15:29 IST
ಅಕ್ಷರ ಗಾತ್ರ

ಹರಿಹರ: ಹರಿಹರದ ಸಾಹಿತ್ಯ ಸಂಗಮ ಸಂಸ್ಥೆ ನೀಡುವ ‘ಹರಿಹರ ಶ್ರೀ’ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳಗಾವಿಯ ಅನ್ನಪೂರ್ಣ ಹಿರೇಮಠ ಹಾಗೂ ಕಾರವಾರದ ಎ.ಎನ್.ರಮೇಶ್ ಗುಬ್ಬಿ ಅವರ ಕವನ ಸಂಕಲನಗಳು ಆಯ್ಕೆಯಾಗಿವೆ.

2021 ಹಾಗೂ 2022ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. 2021ನೇ ಸಾಲಿಗೆ ಅನ್ನಪೂರ್ಣ ಹಿರೇಮಠ ಅವರ ‘ಭಾವ ಸಿರಿ’ ಕವನ ಸಂಕಲನ ಹಾಗೂ 2022ನೇ ಸಾಲಿಗೆ ಎ.ಎನ್.ರಮೇಶ್ ಗುಬ್ಬಿ ಅವರ ‘ಬುದ್ಧ ನಗುತ್ತಿದ್ದಾನೆ’ ಕವನ ಸಂಕಲನ ಆಯ್ಕೆಯಾಗಿದೆ.

ರಾಜ್ಯದ ವಿವಿಧೆಡೆಯಿಂದ ಎರಡು ವರ್ಷದ ಪ್ರಶಸ್ತಿಗೆ 46 ಕವನ ಸಂಕಲನಗಳು ಬಂದಿದ್ದವು. ಆ ಪೈಕಿ ಇವರಿಬ್ಬರ ಕವನ ಸಂಕಲನಗಳು ಆಯ್ಕೆಯಾಗಿವೆ. ಶೀಘ್ರದಲ್ಲೇ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ತಿಳಿಸಿದ್ದಾರೆ.

ಎ.ಎನ್.ರಮೇಶ್ ಗುಬ್ಬಿ
ಎ.ಎನ್.ರಮೇಶ್ ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT