ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೆರೆ ಅಭಿವೃದ್ಧಿ, ಹಸ್ತಾಂತರ

Published 28 ಫೆಬ್ರುವರಿ 2024, 6:19 IST
Last Updated 28 ಫೆಬ್ರುವರಿ 2024, 6:19 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ಯಾಸ್‌’ ಫೌಂಡೇಷನ್‌ ವತಿಯಿಂದ ಅಭಿವೃದ್ಧಿ ಪಡಿಸಿದ ಮಚ್ಚೆ ಗ್ರಾಮದ ಕೆರೆಯನ್ನು ಈಚೆಗೆ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಯಿತು.

2021ರಲ್ಲಿ ಈ ಕೆರೆಯನ್ನು ದತ್ತು ಪಡೆದಿದ್ದ ಫೌಂಡೇಷನ್‌ ತನ್ನ ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಿದೆ. ಎಕೆಪಿ ಫೆರೋಕಾಸ್ಟ್ಸ್ ಗ್ರೂಪ್‌ನ ಮುಖ್ಯಸ್ಥ ರಾಮ್ ಭಂಡಾರಿ, ಪರಾಗ್ ಭಂಡಾರಿ ಮತ್ತು ಗೌತಮ್ ಭಂಡಾರಿ ಅವರ ಸಹಾಯದಿಂದ ಪ್ರತಿಷ್ಠಾನವು ಯೋಜನೆ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ನೀಡಿದೆ.

ನಾಲ್ಕು ಎಕರೆ ವಿಸ್ತೀರ್ಣ ಹೊಂದಿದ ಕೆರೆಯನ್ನು ₹17 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. 20 ಅಡಿ ಆಳದವರೆಗೆ ಅಗೆದು ಹೂಳು ತೆಗೆಯಿಸಿ, ಬದುಗಳನ್ನು ಕಟ್ಟಲಾಗಿದೆ. ಕೆರೆಗೆ ನೀರು ಹರಿದುಬರುವಂತೆ ಇಳಿಜಾರು ನಿರ್ಮಿಸಲಾಗಿದೆ. ಕಾಮಗಾರಿಗೆ ಶಾಸಕ ಶಾಸಕ ಅಭಯ ಪಾಟೀಲ ಸಹಕರ ನೀಡಿದ್ದಾರೆ ಎಂದು ಫೌಂಡೇಷನ್‌ ತಿಳಿಸಿದೆ.

ಈ ಕಾಮಗಾರಿಯ ಕಾರಣ ಈಗಾಗಲೇ ಗ್ರಾಮದ ಸುತ್ತಲಿನ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲೂ ನೀರು ಹೆಚ್ಚಾಗಿದೆ. ರೈತರು ಕೃಷಿ ಮಾಡಲು ನೆರವಾಗುವ ಸಾಧ್ಯತೆ ಇದೆ ಎಂದೂ ಫೌಂಡೇಷನ್‌ ಹೇಳಿದೆ.

ಕೆರೆ ಹಸ್ತಾಂತರ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ರಾಮ್‌ ಭಂಡಾರಿ ಅವರು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಮಾಳಗಿ ಅವರಿಗೆ ಪತ್ರ ಹಸ್ತಾಂತರಿಸಿದರು. ಎಕೆಪಿ ಮುಖಸ್ಥ ಡಾ.ಮಾಧವ್‌ ಪ್ರಭು, ಸಂಯೋಜಕ ಅವಧೂತ್‌ ಸಮಂತ್‌ ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT