ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂತ್‌ ಅಧ್ಯಕ್ಷ ಗೆದ್ದರೆ ಅಭ್ಯರ್ಥಿ ಗೆದ್ದಂತೆ: ಶಾಸಕ ಅಭಯ ಪಾಟೀಲ

Published 29 ಮಾರ್ಚ್ 2024, 13:39 IST
Last Updated 29 ಮಾರ್ಚ್ 2024, 13:39 IST
ಅಕ್ಷರ ಗಾತ್ರ

ಯಮಕನಮರಡಿ: ಒಬ್ಬ ಬೂತ್‌ಮಟ್ಟದ ಅಧ್ಯಕ್ಷ ತನ್ನ ಬೂತ್‌ ಅನ್ನು ಗೆದ್ದರೆ ಅಭ್ಯರ್ಥಿ ಗೆದ್ದಂತೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

ಯಮಕನಮರಡಿಯಲ್ಲಿ ಗುರುವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮತಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಗೆದ್ದರೆ, ಪ್ರಧಾನಿ ಮೋದಿ ಅವರು ಆಯ್ಕೆಯಾದಂತೆ. ಆದ್ದರಿಂದ ಕಾರ್ಯಕರ್ತರು ದಿನಕ್ಕೆ ಎರಡು ಗಂಟೆ, ಬೂತ್‌ ಅಧ್ಯಕ್ಷರು 40 ದಿನ ಕೆಲಸ ಮಾಡಿದರೆ ಸಾಕು. ಹಿಂದಿನ ವಿಧಾನ ಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆಯುತ್ತೇವೆ. ಈ ನಿಟ್ಟಿನಲ್ಲಿ ಪಕ್ಷದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿರಿ ಎಂದರು.

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸ್ವಲ್ಪ ಪ್ರಮಾಣದಲ್ಲಿ ಕುಂಠಿತವಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಸತೀಶ ಅಪ್ಪಾಜಿಗೋಳ, ಚಂದ್ರಶೇಖರ ಕವಟಗಿ, ಬಸು ಹುಂದ್ರಿ, ಕಾರ್ಯಕರ್ತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT