ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಮಹಾಶಿವರಾತ್ರಿ: ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

Published 4 ಮಾರ್ಚ್ 2024, 15:55 IST
Last Updated 4 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಶುಕ್ರವಾರ ಪೇಟೆಯ ರೈಲ್ವೆ ಮೊದಲ ಗೇಟ್‌ ಬಳಿ ಇರುವ ಸಾಯಿ ಪದಮ್‌ ಕಟ್ಟಡದಲ್ಲಿ ಹೈದರಾಬಾದ್‌ ಮೂಲದ ಇಂಡಸ್‌–ನೇಪಾಳ ರುದ್ರಾಕ್ಷಿ ಸಂಸ್ಥೆಯು ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಿರುವ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮಾ.10ರವರೆಗೆ ನಡೆಯಲಿದೆ.
ಇಲ್ಲಿ ಗ್ರಾಹಕರಿಗೆ ವಿರಳವಾಗಿ ಸಿಗುವ ರತ್ನದ ಹರಳು ಲಭ್ಯವಿವೆ. ಸುಮಾರು ₹4.5 ಲಕ್ಷ ಮೌಲ್ಯದ ದುಂಡುಮುಖದ ಏಕಮುಖಿ ರುದ್ರಾಕ್ಷಿ ಸಹ ಮಾರಾಟಕ್ಕಿದೆ.

‘ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದನ್ನು ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ಇಲ್ಲಿ ತಿಳಿಸಲಾಗುತ್ತಿದೆ. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ವ್ಯತ್ಯಾಸ ಮನವರಿಕೆ ಮಾಡಲಾಗುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ, ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು. ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ಮಳಿಗೆ ತೆರೆದಿರುತ್ತದೆ.

ಮಾಹಿತಿಗೆ 7097396666 ಸಂಖ್ಯೆಗೆ ಸಂಪರ್ಕಿಸಬೇಕು’ ಎಂದು ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT