ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಬಸವೇಶ್ವರ ದೇವಸ್ಥಾನದ ಜಾತ್ರೆ ಸಂಪನ್ನ

ಲಕ್ಷಾಂತರ ಭಕ್ತರಿಂದ ದೇವಸ್ಥಾನ ಭೇಟಿ, ಮರಡಿ ಬಸವೇಶ್ವರ ದರ್ಶನ
ರವಿಕುಮಾರ ಎಂ.ಹುಲಕುಂದ
Published 10 ಡಿಸೆಂಬರ್ 2023, 5:25 IST
Last Updated 10 ಡಿಸೆಂಬರ್ 2023, 5:25 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಈ ಬಾರಿ ಹಲವು ವೈಶಿಷ್ಠ್ಯತೆಗಳಿಂದ ಕೂಡಿತ್ತು. ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಮರಡಿ ಬಸವೇಶ್ವರ ದೇವರ ದರ್ಶನ ಪಡೆದರು.

ದೇವಸ್ಥಾನದ ಮಹಾತೇರಿನ ಕಳಶ ಪ್ರತಿಷ್ಠಾಪನೆಯಿಂದ ಹಿಡಿದು ಪ್ರತಿಯೊಂದು ಧಾರ್ಮಿಕ ಕಾರ್ಯದಲ್ಲಿ ಈ ಭಾಗದ ಸಮಸ್ತ ರೈತರು ಸ್ವಯಂ ಪ್ರೇರಣೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಜಾತ್ರೆಯ ಯಶಸ್ವಿಗೆ ಶ್ರಮಿಸಿದರು. ಮರಡಿ ಬಸವೇಶ್ವರ ಪಾಲಕಿ ಮೆರವಣಿಗೆ, ಪೂಜಾ ಕಾರ್ಯಗಳು ಸಕಲ ವಿಧಿ, ವಿಧಾನಗಳಿಂದ ನೆರವೇರಿದವು.

ರಂಜಿಸಿದ ವಿವಿಧ ಕ್ರೀಡೆಗಳು: ನಶಿಸಿ ಹೋಗುತ್ತಿರುವ ಕುಸ್ತಿ ಕಲೆಯನ್ನು ಉಳಿಸಿ, ಬೆಳೆಸುವ ಸದುದ್ದೇಶದಿಂದ ವರ್ಷ ಪದ್ಧತಿಯಂತೆ ವರ್ತಿಸಿದ್ಧ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯಕ್ಷ ಗಂಗಪ್ಪ ಬೋಳನ್ನವರ ಮಾರ್ಗದರ್ಶನದಲ್ಲಿ ಅಂತರರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿ ಪೈಲ್ವಾನರುಗಳಿಂದ ಜಂಗೀ ನಿಖಾಲಿ ಕುಸ್ತಿ ಪಂದ್ಯಗಳು ನಡೆದವು. ಎಲ್ಲ ಕುಸ್ತಿ ಪಟುಗಳು ಕುಸ್ತಿ ಪ್ರೇಮಿಗಳನ್ನು ರಂಜಿಸಿದರು. ಸಾವಿರಾರು ಜನರು ಕುಸ್ತಿ ವೀಕ್ಷಿಸಿದರು.

ಮರಡಿ ಬಸವೇಶ್ವರ ತರುಣ ಸಂಘದಿಂದ ಸಂಘಟಕರಾದ ಶಿವಾನಂದ ಬೆಳಗಾವಿ, ಚಂದ್ರು ಹೊಸೂರ, ಅಜ್ಜಪ್ಪ ಹೊಸೂರ ನೇತೃತ್ವದಲ್ಲಿ ಖಾಲಿ ಗಾಡ ಓಡಿಸುವ ಚಕ್ಕಡಿ ಶರ್ಯತ್ತು ರೋಮಾಂಚನಕಾರಿಯಾಗಿ ನಡೆಯಿತು. ಶರ್ಯತ್ತಿನಲ್ಲಿ ಭಾಗವಹಿಸಿದ ಜೋಡೆತ್ತುಗಳು ಜೀವದ ಹಂಗು ತೊರೆದು ಓಡಿ ಪ್ರಶಸ್ತಿ ಪಡೆದವು. ಬಸವ ಸರ್ಕಲ್ ಗೆಳೆಯರ ಬಳಗದಿಂದ ಭಾರಿ ಸವಾಲ ಜವಾಬ ಭಜನಾ ಸ್ಪರ್ಧೆ ನಡೆಯಿತು.

ಬೃಹತ್ ಉಯ್ಯಾಲೆ: ಜಾತ್ರೆಯಲ್ಲಿ ಈ ಬಾರಿ ಬೃಹತ್ ಉಯ್ಯಾಲೆ, ಆಟಿಕೆ ಸಾಮಾನುಗಳ ಆಕರ್ಷಣೆ ಹೆಚ್ಚಿತ್ತು. 300ಕ್ಕೂ ಹೆಚ್ಚು ಆಟಿಕೆ ಸಾಮಾನುಗಳ ಅಂಗಡಿಗಳು,  20ಕ್ಕೂ ಹೆಚ್ಚು ಉಯ್ಯಾಲೆ,  ಉಗಿಬಂಡಿ, ಜಾರು ಬಂಡೆ ಸೇರಿದಂತೆ ಇನ್ನೂಳಿದ ಆಟಿಕೆಗಳ ಅಂಗಡಿಗಳು ನೋಡುಗರನ್ನು ರಂಜಿಸಿದವು.  ಮಕ್ಕಳು, ಯುವಕ, ಯುವತಿಯರು, ಹಿರಿಯರು ಆಟ ಆಡಿ ಸಂಭ್ರಮಿಸಿದರು.  ದೇವಸ್ಥಾನ ತಳೀರು, ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಬೈಲಹೊಂಗಲ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಮರಡಿ ಬಸವೇಶ್ವರ ತರುಣ ಸಂಘದಿಂದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಶರ್ಯತ್ತು ನಡೆಯಿತು. ಜೋಡೆತ್ತುಗಳು ಜೀವದ ಹಂಗು ತೊರೆದು ಓಡಿದವು.
ಬೈಲಹೊಂಗಲ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಮರಡಿ ಬಸವೇಶ್ವರ ತರುಣ ಸಂಘದಿಂದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಶರ್ಯತ್ತು ನಡೆಯಿತು. ಜೋಡೆತ್ತುಗಳು ಜೀವದ ಹಂಗು ತೊರೆದು ಓಡಿದವು.
ಬೈಲಹೊಂಗಲ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ವರ್ತಿಸಿದ್ಧ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ನಡೆದ ಕುಸ್ತಿ ಪಂದ್ಯದಲ್ಲಿ ಸೆಣಸಿದ ಜಟ್ಟಿಗಳು.

ಐದು ದಿನ ಅದ್ಧೂರಿಯಾಗಿ ನಡೆದ ಜಾತ್ರೆ ರಂಜಿಸಿದ ಕುಸ್ತಿ ಪಂದ್ಯ, ಚಕ್ಕಡಿ ಶರ್ಯತ್ತು ಎಪಿಎಂಸಿ ಗತವೈಭವ ನೆನಪಿಸಿದ ಕೃಷಿಮೇಳ

ಬರದ ನಡುವೆ ಕೃಷಿಮೇಳ ಜಾನುವಾರ ಜಾತ್ರೆ ಯಶಸ್ವಿ ಮಳೆ ಬೆಳೆ ಬಾರದೆ ಬರಗಾಲದ ಸಂಕಷ್ಟದ ಪರಿಸ್ಥಿತಿಯಲ್ಲೂ ರೈತರು ಬೃಹತ್ ಕೃಷಿಮೇಳ ಗಂಟುರೋಗ ಕಾರಣದಿಂದ ಎಲ್ಲಿಯೂ ಜಾನುವಾರುಗಳು ಸೇರದ ಪರಿಸ್ಥಿತಿಯಲ್ಲೂ 300ಕ್ಕೂ ಅಧಿಕ ಸಂಖ್ಯೆಯಲ್ಲಿ ವಿವಿಧ ತಳಿಯ ರಾಸುಗಳನ್ನು ಸೇರಿಸಿ ಯಶಸ್ವಿ ಜಾನುವಾರ ಪ್ರದರ್ಶನ ನಡೆಸಿದರು. ಇದರಿಂದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತನ್ನ ಹಳೆಯ ವೈಭವ ಮೆಲಕು ಹಾಕಿತು. ಮಳಿಗೆಗಳ ವ್ಯಾಪಾರಸ್ಥರು ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT