ಗುರುವಾರ , ಡಿಸೆಂಬರ್ 1, 2022
27 °C

ನಿಪ್ಪಾಣಿ: ಡೆಂಗಿಯಿಂದ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಡೆಂಗಿಯಿಂದ ಬಳಲುತ್ತಿದ್ದ ತಾಲ್ಲೂಕಿನ ಕಾರದಗಾ ಗ್ರಾಮದ ಯುವಕ ಶುಕ್ರವಾರ ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪ್ರೇಮ್ ಸಂಜಯ ಕಮತೆ (19) ಸಾವನ್ನಪ್ಪಿದವರು. 

ಬಿಎಸ್ಪಿ ಓದುತ್ತಿದ್ದ ಪ್ರೇಮ್ ಎಂಟು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದರು. ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಇಚಲಕರಂಜಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಡೆಂಗಿ ತಗಲಿದ್ದು ಖಚಿತವಾಗಿತ್ತು.

ಶುಕ್ರವಾರ ಆರೋಗ್ಯ ಹಠಾತ್ ಕ್ಷೀಣಿಸಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು ಕುಟುಂಬದ ಮೂಲಗಳು ತಿಳಿಸಿವೆ.

ಯುವಕನ ಸಾವಿನಿಂದ ಗ್ರಾಮದಲ್ಲಿ ಡೆಂಗಿ ಭೀತಿ ಆವರಿಸಿದೆ. ಜ್ವರ ಕಾಣಿಸಿಕೊಂಡ ಮತ್ತೆ ಕೆಲವರು ಆಸ್ಪತ್ರೆಗೆ ದೌಡಾಯಿಸಿ ತಪಾಸಣೆಗೆ ಒಳಗಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು