ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಬಸವ ಸ್ವಾಮೀಜಿ ಜಯಂತ್ಯುತ್ಸವ

ಹಲವು ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ
Last Updated 3 ಡಿಸೆಂಬರ್ 2019, 12:07 IST
ಅಕ್ಷರ ಗಾತ್ರ

ಬೆಳಗಾವಿ: ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಅವರ 130ನೇ ಜಯಂತಿ ಮಹೋತ್ಸವ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಇಲ್ಲಿನ ಶಿವಬಸವ ನಗರದ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಡಿ. 5ರಿಂದ 8ರವರೆಗೆ ನಡೆಯಲಿವೆ.

ಡಂಬಳ-ಗದಗ ತೋಂಟದಾರ್ಯ ಸಂಸ್ಥಾನ ಮಠದ ‌ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಉತ್ಸವ ನಡೆಯಲಿದೆ. 5ರಂದು ಬೆಳಿಗ್ಗೆ 9ಕ್ಕೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಲಿದೆ. ಸಂಜೆ 5ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ, ಕಡೋಲಿ ದುರುದುಂಡೀಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮುಖ್ಯಅತಿಥಿಯಾಗಿ ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಭಾಗವಹಿಸಲಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾಜಿ ಕಾಗಣಿಕರ, ಡಾ.ಎಸ್.ಆರ್. ಗುಂಜಾಳ, ಹೂಲಿ ಶೇಖರ್ ಹೂಲಿ, ಹೊಳಬಸಯ್ಯ ದುಂಡಯ್ಯ ಸಂಬಾಳದ ಅವರನ್ನು ಗೌರವಿಸಲಾಗುವುದು. ಕನ್ನಡ ಪರ ಹೋರಾಟಗಾರರಾದ ಮಹಾಂತೇಶ ರಣಗಟ್ಟಿಮಠ, ವಿನಯ ಢವಳಿ, ಶಿವಪ್ಪ ಶಮರಂತ, ಕಸ್ತೂರಿ ಭಾವಿ ಅವರಿಗೆ ‘ಕನ್ನಡ ನುಡಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

6ರಂದು ಸಂಜೆ 5ಕ್ಕೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಗನೂರು ಪ್ರಸಾದನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷಪ್ರೊ.ಎಂ.ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ ಮುಖ್ಯಅತಿಥಿಯಾಗಿ ಭಾಗವಹಿಸುವರು.

ಬಸವರಾಜ ಎಂ. ಹಟ್ಟಿಗೌಡರ, ಎಸ್.ವಿ. ದಳವಾಯಿ, ಎಂ.ಡಿ. ಪಾಟೀಲ, ಮಹಾಂತೇಶ ಶಿ. ಘಟಗಿ ಅವರಿಗೆ ‘ಪ್ರಸಾದಶ್ರೀ ಗೌರವ’ ಪ್ರದಾನ ಮಾಡಲಾಗುವುದು. ಮಕ್ಕಳ ಸಾಹಿತ್ಯಕ್ಕೆ ನೀಡುವ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ಚಂದ್ರಕಾಂತ ಕರದಳ್ಳಿ ಮತ್ತು ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿ ಎ.ಕೆ. ರಾಮೇಶ್ವರ ಅವರಿಗೆ ನೀಡಲಾಗುವುದು. ಕೆಪಿಎಸ್‌ಸಿ ಸದಸ್ಯ ವಿಜಯ ಕುಚನೂರ ಹಾಗೂ ನಿವೃತ್ತ ಕಮಾಂಡರ್‌ ಬಿ.ಎಸ್. ಕಲ್ಲೂರ ಅವರನ್ನು ಸನ್ಮಾನಿಸಲಾಗುವುದು.

7ರಂದು ಸಂಜೆ 5ಕ್ಕೆ ‘ಸೇವಾರತ್ನ ಹಾಗೂ ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದ್ದು, ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ‘ಆತ್ಮಸ್ವಾಸ್ಥ್ಯಶ್ರೀ’ ಪ್ರಶಸ್ತಿಯನ್ನು ಮೌಂಟ್ ಅಬುವಿನ ಆಹಿರ್ ಶಾಂತಿ ಅವರಿಗೆ ನೀಡಲಾಗುವುದು. ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ, ಆರ್.ಎಂ. ಹೆಗಡೆ, ಸುಭಾಸ ಇಂಗಳೇಶ್ವರ, ರತ್ನಕ್ಕ ಪಾಟೀಲ, ಮಹಮ್ಮದ್‌ ಕುಂಞ, ಪ್ರೊ.ಎಂ.ಆರ್. ಉಳ್ಳೆಗಡ್ಡಿ, ಪ್ರೊ.ರಂಗರಾಜ ವನದುರ್ಗ, ಬಿ.ಬಿ. ಹೊಸಮನಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ನೀಡಲಾಗುವುದು. ಪ್ರೊ.ಬಿ.ಆರ್. ಪೋಲಿಸ್ ಪಾಟೀಲ ವಿರಚಿತ ‘ಮಹಾವೃಕ್ಷ‘ ಕಾದಂಬರಿ, ಆರ್.ಪಿ. ಅಪರಾಜವಿರಚಿತ ‘ಬಸವಧರ್ಮ ಅಂದು-ಇಂದು’, ಡಾ.ರಾಮಕೃಷ್ಣ ಮರಾಠೆ ವಿರಚಿತ ‘ಶಿವಬಸವ ಸಂಪುಟ‘, ಕನ್ನಡದ ಕಾಯಕಯೋಗಿ ಸಿ.ಡಿ. ಬಿಡುಗಡೆ ಮಾಡಲಾಗುವುದು

8ರಂದು ಬೆಳಿಗ್ಗೆ 10.30ಕ್ಕೆ ಶಿವಬಸವ ಸ್ವಾಮೀಜಿ ಜಯಂತಿ ಆಚರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT