‘ಗಣಿತ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಿ’

ಶುಕ್ರವಾರ, ಏಪ್ರಿಲ್ 26, 2019
24 °C

‘ಗಣಿತ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಿ’

Published:
Updated:

ಹೊಸಪೇಟೆ: ‘ಬರುವ ವರ್ಷ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಬೇಕು’ ಎಂದು ಇಲ್ಲಿನ ಮಹಿಳಾ ಸಮಾಜ ಶಾಲೆ ಗಣಿತ ಮೌಲ್ಯಮಾಪನ ಕೇಂದ್ರದ ಮೌಲ್ಯಮಾಪಕರು ಆಗ್ರಹಿಸಿದ್ದಾರೆ.

ಅವರು ಈ ಸಂಬಂಧ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಇತರೆ ವಿಷಯಗಳಿಗಿಂತ ಗಣಿತ ಶಿಕ್ಷಕರು ಹೆಚ್ಚು ಪರಿಶ್ರಮ, ಪಾಠ ಬೋಧನೆ ಮಾಡಿದರೂ ಪ್ರತಿ ವರ್ಷ ಫಲಿತಾಂಶ ತೃಪ್ತಿದಾಯಕವಾಗಿ ಬರುತ್ತಿಲ್ಲ. ಹೀಗಾಗಿ ಪ್ರಶ್ನೆ ಪತ್ರಿಕೆಯ ಮಾದರಿ ಬದಲಿಸಬೇಕು. ವಿಜ್ಞಾನ ಮತ್ತು ಸಮಾಜ ವಿಷಯದಲ್ಲಿ ಬಹು ಆಯ್ಕೆಯ 10, ಹೊಂದಿಸಿ ಬರೆಯಿರಿ 4, ಒಂದು ಅಂಕಗಳ ಏಳು ಪ್ರಶ್ನೆಗಳು ಸೇರಿದಂತೆ ಒಟ್ಟು 21 ಅಂಕಗಳ ಪ್ರಶ್ನೆಗಳಿರುತ್ತವೆ. ಆದರೆ, ಗಣಿತದಲ್ಲಿ ಬಹು ಆಯ್ಕೆಯ ಎಂಟು, ಒಂದು ಅಂಕದ ಆರು ಪ್ರಶ್ನೆಗಳಷ್ಟೇ ಇರುತ್ತವೆ. ಹೀಗಾಗಿ ಈ ಪದ್ಧತಿ ಬದಲಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !