ಸೋಮವಾರ, ನವೆಂಬರ್ 18, 2019
27 °C

‘ಮಾಜಿ ಸಂಸದರ ಹೆಸರು ಸೇರಿಸಿ’

Published:
Updated:

ಹೊಸಪೇಟೆ: ‘ಇದೇ 17ರಂದು ನಡೆಯಲಿರುವ ಹೊಸಪೇಟೆ–ಕೊಟ್ಟೂರು ಪ್ರಯಾಣಿಕರ ರೈಲು ಉದ್ಘಾಟನಾ ಸಮಾರಂಭಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಮಾಜಿ ಸಂಸದೆ ಜೆ. ಶಾಂತಾ ಅವರನ್ನು ಆಹ್ವಾನಿಸಬೇಕು’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಆಗ್ರಹಿಸಿದ್ದಾರೆ. 

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘ರೈಲು ಓಡಿಸಬೇಕೆಂಬ ಬೇಡಿಕೆಗೆ ಈ ಭಾಗದ ಎಲ್ಲಾ ಮಠಾಧೀಶರು, ಸಂಘ ಸಂಸ್ಥೆಗಳು, ಪಕ್ಷಾತೀತವಾಗಿ ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಈ ಹಿಂದೆ ಸಂಸದರಾಗಿದ್ದಾಗ ಶ್ರೀರಾಮುಲು, ಶಾಂತಾ ಅವರು ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಿದ್ದಾರೆ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ತಪ್ಪು. ಕೂಡಲೇ ಆಗಿರುವ ತಪ್ಪು ಸರಿಪಡಿಸಿ, ಆಹ್ವಾನ ಪತ್ರಿಕೆಯಲ್ಲಿ ಇವರಿಬ್ಬರ ಹೆಸರು ಸೇರಿಸಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)