2045ರಲ್ಲಿ ಗಡಿಗಿ ಚೆನ್ನಪ್ಪ ವೃತ್ತ!?

7

2045ರಲ್ಲಿ ಗಡಿಗಿ ಚೆನ್ನಪ್ಪ ವೃತ್ತ!?

Published:
Updated:
Deccan Herald

ಬಳ್ಳಾರಿ: ನಗರದ ಗಡಿಗಿ ಚೆನ್ನಪ್ಪ ವೃತ್ತ 2045ರಲ್ಲಿ ಹೇಗಿರುತ್ತದೆ?– ಇದಕ್ಕೆ ಉತ್ತರ ಹೇಳುವುದು ಕಷ್ಟ. ಆದರೆ ಈ ವೃತ್ತ 27 ವರ್ಷ ಮುಂದೆ ಇದೆ ಎಂದು ಭಾಸವಾಗುವ ರೀತಿಯಲ್ಲಿ ಅಲ್ಲಿನ ಗಡಿಯಾರ ಕಂಬದ ಡಿಜಿಟಲ್‌ ಪರದೆಗಳು ತೋರಿಸುತ್ತಿವೆ!

ವೃತ್ತದಲ್ಲಿರುವ ಗಡಿಯಾರ ಕಂಭದ ನಾಲ್ಕು ದಿಕ್ಕುಗಳಲ್ಲೂ ಅಳವಡಿಸಿರುವ ಪರದೆಗಳಲ್ಲಿ ಭಿನ್ನ ದಿನಾಂಕ ಮತ್ತು ವರ್ಷಗಳಿವೆ. 2010, 2016 ಮತ್ತು 2017ನೇ ಇಸವಿಗಳೂ ಇವೆ.

‘ವಾಹನ ಚಲಿಸುವಾಗ ಮೊಬೈಲ್ ಬಳಸಬೇಡಿ’ ಎಂಬ ರಸ್ತೆ ಸುರಕ್ಷತೆಯ ಸಂದೇಶದ ಜೊತೆಗೆ ದಿನಾಂಕ ಮತ್ತು ಸಮಯ ವ್ಯತ್ಯಾಸವಾಗಿ ಪ್ರಕಟವಾಗುತ್ತಿದೆ. ಹಲವು ದಿನಗಳಿಂದ ಈ ವಿಪರ್ಯಾಸ ಏರ್ಪಟ್ಟಿದೆ. ಬುಧವಾರವೂ ಇದು ಹೀಗೇ ಇತ್ತು.

ಪಾಲಿಕೆ ಕಚೇರಿಯ ಮುಂದೆಯೇ ಈ ವೃತ್ತವಿದೆ. ಜಿಲ್ಲಾಧಿಕಾರಿ ಕಚೇರಿಯೂ ಸಮೀಪದಲ್ಲೇ ಇದೆ. ದೊಡ್ಡ ಅಧಿಕಾರಿಗಳು ಸಂಚರಿಸಿದರೂ ಈ ಲೋಪ ಸರಿಯಾಗಿಲ್ಲ.
ಜಯದೇವ, ಹನುಮಂತ, ನಗರದನಿವಾಸಿಗಳು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !