ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹದ ಕೈದಿಗಳ ಆರೋಗ್ಯ ತಪಾಸಣೆ

Last Updated 16 ಆಗಸ್ಟ್ 2022, 15:39 IST
ಅಕ್ಷರ ಗಾತ್ರ

ಹೊಸಪೇಟೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಉಪ ಕಾರಾಗೃಹದ ಕೈದಿಗಳ ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸೋಮವಾರ ಆಯೋಜಿಸಲಾಗಿತ್ತು.

ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ಮಾನಸಿಕ ಆರೊಗ್ಯ ತಪಾಸಣೆ ನಡೆಸಲಾಯಿತು. ಉಪ ಕಾರಾಗೃಹದ ಸೂಪರಿಟೆಂಡೆಂಟ್‌ ಎಂ.ಎಚ್.ಕಲಾದಗಿ, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಸೋಮಶೇಖರ್, ಡಾ.ಹರಿಪ್ರಸಾದ್ ಹಾಗೂ ಕೌನ್ಸಲರ್‌ಗಳಾದ ಮಾರೇಶ್ ಜಿ., ಸಹದೇವ್ ಹಾಗೂ ಕಾರಾಗೃಹದ ಸಿಬ್ಬಂದಿ ಇದ್ದರು.

ಅಂಬೆ ಪ್ರಕಾಶನದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ವಿದ್ವಾಂಸ ನಾಗರಾಜ ಪತ್ತಾರ್, ಗೃಹ ರಕ್ಷಕದಳದ ಸಮಾದೇಶ ಅಧಿಕಾರಿ ಎಸ್.ಎಂ.ಗಿರೀಶ್, ಪ್ರಕಾಶನದ ಅಧ್ಯಕ್ಷೆ ಅಂಜಲಿ ಬೆಳಗಲ್, ಸಂಗೀತ ಕಲಾವಿದ ಸಂತೋಷ ಹೊಸಕೋಟೆ, ನೃತ್ಯ ಕಲಾವಿದ ರಾಮಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT