ಜ. 8, 9 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

7
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ

ಜ. 8, 9 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

Published:
Updated:

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಜ. 8, 9 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು ಬೆಂಬಲ ‌ನೀಡುವಂತೆ ಸಂಘಟನೆಗಳನ್ನು ಕೋರಿದ್ದೇವೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು ತಿಳಿಸಿದರು.

ಪಡಿತರ ವ್ಯವಸ್ಥೆಯ ಸಾರ್ವತ್ರಿಕರಣ,  ಅಗತ್ಯ‌ವಸ್ತುಗಳ ಬೆಲೆ ಏರಿಕೆಗೆ ತಡೆ, ನಿರುದ್ಯೋಗ ಸಮಸ್ಯೆ ನಿವಾರಣೆ, ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕ ರಿಗೆ ಕೆಲಸ ಕೊಡಬೇಕು ಎಂಬುದು ಸೇರಿ ಹನ್ನೆರಡು ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ‌ ಗಮನ ಸೆಳೆದರೂ ಕೇಂದ್ರ ಕ್ರಮ ವಹಿಸಿಲ್ಲ. ಹೀಗಾಗಿ‌ ಮುಷ್ಕರದ ಸಲುವಾಗಿ ಬಂದ್ ಆಚರಿಸಲಾಗುವುದು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದ್ವಿಪಕ್ಷೀಯ ಸಭೆ ನಡೆಸದೆ ಕಾರ್ಮಿಕ ಸಂಘಟನೆಗಳನ್ನು ಸರ್ಕಾರ ಕಡೆಗಣಿಸುತ್ತಿದೆ. ಕಾರ್ಮಿಕ ಕಾಯ್ದೆಯನ್ನು ಬಂಡವಾಳಶಾಹಿ ಪರವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಮುಖಂಡ‌ ಇಸ್ಮಾಯಿಲ್ ದೂರಿದರು.

ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, 18 ಸಾವಿರ ಕನಿಷ್ಠ ವೇತನ ನೀಡುವುದು, ಎಲ್ಲಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ನೀಡುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ‌ ನಿರಂತರ ಹೋರಾಟ ನಡೆಸಬೇಕಾದ ‌ಅನಿವಾರ್ಯ ಸನ್ನಿವೇಶ ನಿರ್ಮಾಣ ವಾಗಿದೆ ಎಂದು ಸಾರಿಗೆ ಕಾರ್ಮಿಕ ನೌಕರರ ಸಂಘದ ಆದಿಮೂರ್ತಿ,ಎ.ದೇವದಾಸ್ ಮತ್ತು‌ ಗುರುಮೂರ್ತಿ‌ ಮತ್ತು  ದೂರಿದರು.

ಹತ್ತು ಕಾರ್ಮಿಕ ಸಂಘಟನೆಗಳ ಅಡಿಯಲ್ಲಿ ಬರುವ‌ ವಿವಿಧ ಕ್ಷೇತ್ರದ ಐದು‌ ಕೋಟಿ  ಕಾರ್ಮಿಕರು ಮುಷ್ಕರದಲ್ಲಿ  ಪಾಲ್ಗೊಳ್ಳುವ‌ ನಿರೀಕ್ಷೆ ಇದೆ ಎಂದರು.

ಮುಖಂಡರಾದ ಟಿ.ಜಿ.ವಿಠಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !