ಮುಖ ತೊಳೆಯಲು ಫಿಲ್ಟರ್‌ ವಾಟರ್‌!

7
ನೌಕರನ ಆತ್ಮಹತ್ಯೆ ಯತ್ನ: ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಮುಖ ತೊಳೆಯಲು ಫಿಲ್ಟರ್‌ ವಾಟರ್‌!

Published:
Updated:

ಬಳ್ಳಾರಿ: ‘ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಡಿ ದರ್ಜೆ ನೌಕರ ಸದಾಶಿವ ಈಡಿಗಾರ ಆತ್ಮಹತ್ಯೆಗೆ ಯತ್ನತಿಸಲು ಮಹ್ಮದ್‌ ಫಯಾಜ್‌ ಅವರ ದುರ್ವರ್ತನೆಯೇ ಕಾರಣ. ಹೀಗಾಗಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಬಳ್ಳಾರಿ ವಿಭಾಗ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.

‘ಕಚೇರಿಯಲ್ಲಿ ಮುಖ ತೊಳೆಯಲಿಕ್ಕೆ ಫಿಲ್ಟರ್‌ ವಾಟರ್‌ ತಂದಿಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಯು ನೌಕರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅಮಾನವೀಯ. ಆ ಬಗ್ಗೆ ನೌಕರ ಆತ್ಮಹತ್ಯೆಗೂ ಮುನ್ನ ಬರೆದ ತಮ್ಮ ಪತ್ರದಲ್ಲಿ ದಾಖಲಿಸಿದ್ದಾರೆ’ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಅಧಿಕಾರಿಯು ತುಚ್ಛವಾಗಿ ವರ್ತಿಸಿ ಅವಮಾನಿಸಿದ್ದರಿಂದಲೇ ನೊಂದ ನೌಕರ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ಮಧ್ಯೆ ನರಳಾಡುವಂತಾಗಿದೆ. ಕೂಡಲೇ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಸಂಘದ ಅಧ್ಯಕ್ಷ ಎಚ್‌.ಎ.ಆದಿಮೂರ್ತಿ, ಉಪಾಧ್ಯಕ್ಷ ಟಿ.ಚೆನ್ನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿ ಮಠ ಆಗ್ರಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !