ವೇದಿಕೆಗಳ ತೀರ್ಮಾನ 9ರಂದು: ಡಿ.ಸಿ.

7
ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆ ಆರಂಭ

ವೇದಿಕೆಗಳ ತೀರ್ಮಾನ 9ರಂದು: ಡಿ.ಸಿ.

Published:
Updated:
Deccan Herald

ಬಳ್ಳಾರಿ: ‘ನವೆಂಬರ್ 3ರಿಂದ 5ರವರೆಗೆ ಮೂರು ದಿನ ಕಾಲ ಹಂಪಿಯಲ್ಲಿ ನಡೆಯಲಿರುವ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ವೇದಿಕೆಗಳು ಎಷ್ಟಿರಬೇಕು ಎಂಬುದನ್ನು ಅ.9ರ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್‌ ಮನೋಹರ್ ತಿಳಿಸಿದರು.

ನಗರದ ವಾರ್ತಾ ಇಲಾಖೆ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಗಾಂಧೀಭವನ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುವುದು’ ಎಂದರು.

ಟೆಂಡರ್ ಅಂತಿಮ: ‘ಉತ್ಸವವನ್ನು ಅಚ್ಟುಕಟ್ಟಾಗಿ ನಡೆಸುವ ಸಲುವಾಗಿ ವೇದಿಕೆ ನಿರ್ಮಾಣ ಮತ್ತು ಮೂಲಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ’ ಎಂದರು.

‘ಕಲಾವಿದರ ಆಯ್ಕೆಗೆ ಸಂಬಂಧಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅ.15ರವರೆಗೂ ಆಸಕ್ತರು ಅರ್ಜಿ ಸಲ್ಲಿಸಬಹುದು. ಹಿಂದಿನ ವರ್ಷ ದೇಶ ವಿದೇಶಗಳವರೂ ಸೇರಿ 3 ಸಾವಿರ ಕಲಾವಿದರು ಉತ್ಸವದಲ್ಲಿ ಭಾಗವಹಿಸಿದ್ದರು 3 ಲಕ್ಷಕ್ಕಿಂತ ಹೆಚ್ಚು ಜನರು ಉತ್ಸವವನ್ನು ಕಣ್ತುಂಬಿಕೊಂಡಿದ್ದರು’ ಎಂದು ಸ್ಮರಿಸಿದರು.

ಜೂನ್‌ನಲ್ಲಿ ಗಾಂಧಿಭವನ ಉದ್ಘಾಟನೆ: ಗಾಂಧೀ ಭವನವನ್ನು ಮುಂದಿನ ವರ್ಷ ಜೂನ್‌ ವೇಳೆಗೆ ಉದ್ಘಾಟಿಸಲಾಗುವುದು. ₨ 3 ಕೋಟಿ ವೆಚ್ಚದಲ್ಲಿ 2700 ಚದರ ಅಡಿಯಲ್ಲಿ ಭವನ ನಿರ್ಮಾಣವಾಗುತ್ತಿದೆ. ವಿನ್ಯಾಸಕ್ಕೆ ತಕ್ಕಂತೆ ನಿರ್ಮಾಣ ಮಾಡಬೇಕು. ಭವನದ ಮುಂದೆ ಗಾಂಧಿ ಜೀವನಕ್ಕೆ ಸಂಬಂಧಿಸಿದ ವೈವಿಧ್ಯಮಯ ಚಿತ್ರಗಳನ್ನು ಬರೆಸಬೇಕು ಎಂದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

‘ಭವನದ ಎದುರಿಗೆ ಇರುವ ಭೂ ದಾಖಲೆಗಳ ಇಲಾಖೆ ಕಟ್ಟಡ ಮತ್ತು ನಿವೃತ್ತ ಸರಕಾರಿ ನೌಕರರ ಸಂಘದ ನೀಡಲಾದ ಕಟ್ಟಡವನ್ನು ನೆಲಸಮಗೊಳಿಸಿ’ ಎಂದು ಹೇಳಿದರು.

ಪ್ರೊಬೆಷನರಿ ಐಎಎಸ್ ಅಧಿಕಾರಿ ಕೆ.ಆರ್‌.ನಂದಿನಿ, ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ನಿಗಮದ ಎಂಜಿನಿಯರ್‌ಗಳಾದ ವಾಣಿ ಮತ್ತು ಹರೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !