ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರ್ಯಾಯ ಗಿಡ ನೆಡುವ ಪ್ರಕ್ರಿಯೆ: ಕೆ–ರೈಡ್‌

Published 15 ಮೇ 2024, 19:24 IST
Last Updated 15 ಮೇ 2024, 19:24 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಅನುಷ್ಠಾನಕ್ಕಾಗಿ ಒಟ್ಟು 32,572 ಮರಗಳನ್ನು ಕಡಿಯಬೇಕಿದ್ದು, ಪ್ರತಿ ಮರಕ್ಕೆ 10 ಗಿಡ ನೆಡಲಾಗುವುದು ಎಂದು ಕೆ–ರೈಡ್‌ ತಿಳಿಸಿದೆ.

ಒಟ್ಟು ಕಡಿಯಬೇಕಿರುವ ಮರಗಳಲ್ಲಿ 17,505 ಮರಗಳು ದೇವನಹಳ್ಳಿ ಪ್ರದೇಶದ ಅಕ್ಕುಪೇಟೆ ಡಿಪೊ ವ್ಯಾಪ್ತಿಯಲ್ಲಿದ್ದು, ಹೆಚ್ಚಾಗಿ ನೀಲಗಿರಿ ಮತ್ತು ಅಕೇಶಿಯಾ ಆಗಿವೆ. ಉಳಿದ 15,067 ಮರಗಳ ಪೈಕಿ 1071 ಮರಗಳು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 13,996 ಮರಗಳಲ್ಲಿ 2098 ಅನ್ನು ಕತ್ತರಿಸಲು ಹಾಗೂ 178 ಮರಗಳನ್ನು ಕಸಿ ಮಾಡಲು ಬಿಬಿಎಂಪಿಗೆ ಈಗಾಗಲೇ ವಹಿಸಲಾಗಿದೆ. 1ಕ್ಕೆ 10 ಗಿಡಗಳನ್ನು ನೆಡುವುದಕ್ಕಾಗಿ ಬಿಬಿಎಂಪಿಗೆ ಕೆ–ರೈಡ್‌ ವತಿಯಿಂದ ₹ 8.07 ಕೋಟಿ ಪಾವತಿಸಲಾಗಿದೆ. ಗಿಡಗಳನ್ನು ನೆಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕೆ–ರೈಡ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಸುಸ್ಥಿರ ನಗರ ಸಂಚಾರಕ್ಕಾಗಿ ಬಿಎಸ್‌ಆರ್‌ಪಿ ಬದ್ಧವಾಗಿದ್ದು, ಎಲ್ಲ 58 ನಿಲ್ದಾಣಗಳಲ್ಲಿ ಹಸಿರು ಶಕ್ತಿಯ ಬಳಸಲು ನಿರ್ಧರಿಸಲಾಗಿದೆ. ಕಾರ್ಯಸಾಧ್ಯ ಸ್ಥಳಗಳಲ್ಲಿ ಸೌರಫಲಕ ಅಳವಡಿಸಲಾಗುವುದು. ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT