ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

12,13ಕ್ಕೆ ಪ್ರತಿಭೆಯ ಅನ್ವೇಷಣೆ ‘ಪ್ರಶಾಂತೋತ್ಸವ’

Published 4 ಜನವರಿ 2024, 15:47 IST
Last Updated 4 ಜನವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಶಾಂತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ‘ಪ್ರಶಾಂತೋತ್ಸವ–2024’ ಪ್ರತಿಭೆಯ ಅನ್ವೇಷಣೆ ಹೆಸರಿನಲ್ಲಿ ಅಂತರ್‌ ಪ್ರೌಢಶಾಲಾ ಪ್ರತಿಭೋತ್ಸವವನ್ನು ಜ.12 ಮತ್ತು 13ರಂದು ಹಮ್ಮಿಕೊಂಡಿದೆ.

100ಕ್ಕೂ ಅಧಿಕ ಪ್ರೌಢಶಾಲೆಗಳ 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭಗವದ್ಗೀತೆ ಕಂಠಪಾಠ, ಭಾವಗೀತೆ ಗಾಯನ–ವೃಂದ, ಜನಪದ ನೃತ್ಯ –ವೃಂದ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ, ಸಾಮಾಜಿಕ ಕಳಕಳಿ ವಿಷಯಾಧಾರಿತ ಕಿರುನಾಟಕ ಸ್ಪರ್ಧೆಗಳು ನಡೆಯಲಿವೆ. 

ವಿಜೇತರಿಗೆ ₹1 ಲಕ್ಷ ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ನೆನಪಿನ ಫಲಕ ನೀಡಲಾಗುವುದು. ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಮಾಹಿತಿಗೆ ಅಧ್ಯಕ್ಷ ಜಿ. ಫಣಿರಾಜ್‌ (9844099545), ಸಂಚಾಲಕ ಎ. ಮಧುಕರ್‌ (9448709975) ಸಂಪರ್ಕಿಸಬಹುದು. ಇ–ಮೇಲ್‌: prashantotsava@gmail.comಗೆ ಮೇಲ್ ಮಾಡಬಹುದು ಎಂದು ಕಾರ್ಯದರ್ಶಿ ಜಿ.ಎ. ಪ್ರವೀಣ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT