‘ದೇಶದಲ್ಲಿ ಪ್ರತಿಭಾವಂತ ಲೆಕ್ಕಪರಿಶೋಧಕರ ಕೊರತೆ’

7

‘ದೇಶದಲ್ಲಿ ಪ್ರತಿಭಾವಂತ ಲೆಕ್ಕಪರಿಶೋಧಕರ ಕೊರತೆ’

Published:
Updated:

ಬೆಂಗಳೂರು: ‘ದೇಶದಲ್ಲಿ ಪ್ರತಿಭಾವಂತ ಲೆಕ್ಕಪರಿಶೋಧಕರ ಕೊರತೆ ಹೆಚ್ಚಾಗಿದೆ’ ಎಂದು ಲೆಕ್ಕ ಪರಿಶೋಧಕ ಎ.ಸಂಜೀವ ವಿಷಾದಿಸಿದರು.

ನಗರದ ಆರ್‌ಬಿಎಎನ್‌ಎಂಎಸ್‌ ಶಿಕ್ಷಣ ಸಂಸ್ಥೆ ವತಿಯಿಂದ ವಾಣಿಜ್ಯ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ‘ಸಿ.ಎ ಫೌಂಡೇಷನ್‌’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸಿ.ಎ ಪದವಿ ಮುಗಿಸಿದವರು ಕೆಲಸಕ್ಕಾಗಿ ಅಲೆಯಬೇಕಾಗಿಲ್ಲ, ಕಂಪನಿಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ’ ಎಂದು ಹೇಳಿದರು.

ಕಾಮರ್ಸ್‌ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ಕರಿಯರ್‌ ಲಾಂಚರ್‌ನ ಪ್ರಶಾಂತ್‌ ವಿವರಿಸಿದರು.

‘ಬಡ ವಿದ್ಯಾರ್ಥಿಗಳಿಗೆ ಸಿ.ಎ. ಓದುವುದು ಗಗನ ಕುಸುಮವಾಗದಿರಲೆಂದೇ ನಮ್ಮ ಸಂಸ್ಥೆ ಸಿ.ಎ ಓದುವ ಕನಸನ್ನು ನನಸು ಮಾಡುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಡಾ.ವೀರಭದ್ರಪ್ಪ ಹೇಳಿದರು.

ಪ್ರಾಂಶುಪಾಲ ಡಾ.ಜಯಪ್ಪನವರ, ಡಾ.ಜಿ.ಕೆ.ರಂಗನಾಥನ್‌ ಸೇರಿದಂತೆ 200ಕ್ಕೂ ಹೆಚ್ಚು  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry