ಮೆಟ್ರೊದಿಂದ ಕೆಂಗೇರಿ, ವೀರಸಂದ್ರ ಕೆರೆ ಪುನಶ್ಚೇತನ

7

ಮೆಟ್ರೊದಿಂದ ಕೆಂಗೇರಿ, ವೀರಸಂದ್ರ ಕೆರೆ ಪುನಶ್ಚೇತನ

Published:
Updated:
ಮೆಟ್ರೊದಿಂದ ಕೆಂಗೇರಿ, ವೀರಸಂದ್ರ ಕೆರೆ ಪುನಶ್ಚೇತನ

ಬೆಂಗಳೂರು: ವಿನಾಶದ ಅಂಚು ತಲುಪಿರುವ ಕೆಂಗೇರಿ ಮತ್ತು ವೀರಸಂದ್ರ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ.

ಕೆಂಗೇರಿ ಕೆರೆ ಅಭಿವೃದ್ಧಿಗಾಗಿ ನಿಗಮದಿಂದ 2017ರ ಜನವರಿಯಲ್ಲಿಯೇ ಟೆಂಡರ್‌ ಕರೆಯಲಾಗಿತ್ತು. ‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಎಲ್‌ಸಿಡಿಎ) ಕಠಿಣ ನಿಯಮಗಳಿಂದಾಗಿ ಆ ಯೋಜನೆ ಸ್ಥಗಿತಗೊಂಡಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.

‘ಒಂದು ವರ್ಷದ ಹಿಂದೆಯೇ ಯೋಜನೆಯ ಸಮಗ್ರ ವರದಿಯನ್ನು (ಡಿಪಿಆರ್‌) ರೂಪಿಸಿದ್ದೇವೆ. ಒತ್ತುವರಿ ತೆರವು ಮತ್ತು ಕೆಎಲ್‌ಸಿಡಿಎಯಿಂದ ಅನುಮತಿ ಪಡೆಯುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅಲ್ಲದೆ, ಕಟ್ಟುನಿಟ್ಟಾದ ಟೆಂಡರ್‌ ನಿಯಮಗಳಿಂದ ಬಿಡ್ಡರ್‌ಗಳನ್ನು ಆಕರ್ಷಿಸುವುದು ಕಷ್ಟವಾಯಿತು’ ಎಂದು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಮಾಹಿತಿ ನೀಡಿದರು.

ಕೊನೆಗೂ ಎಂಆರ್‌ ಪ್ರೊಟೆಕ್‌ ಪ್ರೈವೇಟ್‌ ಲಿಮಿಡೆಟ್‌ ಟೆಂಡರ್‌ ಪಡೆದಿದ್ದು, ₹7 ಕೋಟಿ ವೆಚ್ಚದಲ್ಲಿ ಕೆಂಗೇರಿ ಕೆರೆ ಅಭಿವೃದ್ಧಿ ಪಡಿಸಲಿದೆ. ‘ಕೆರೆಗೆ ಸಂಪರ್ಕಿಸಲಾಗಿದ್ದ ಒಳಚರಂಡಿ ಮಾರ್ಗಗಳನ್ನು ಜಲಮಂಡಳಿಯೇ ಬದಲಿಸಿದೆ. ಅಲ್ಲಿದ್ದ ಕಸದ ರಾಶಿಯನ್ನು ಬಿಬಿಎಂಪಿ ತೆರವುಗೊಳಿಸಿದೆ’ ಎಂದು ಅವರು ಹೇಳಿದರು.

ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌, ‘ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಣಕಾಸು ನೆರವಿಗಾಗಿ ಹುಡುಕಾಟ ನಡೆಸಿದೆವು. ಕೊನೆಗೆ ನಿಗಮದಿಂದಲೇ ಎಲ್ಲಾ ವೆಚ್ಚ ಭರಿಸಲು ನಿರ್ಧರಿಸಲಾಯಿತು. ಕೆರೆಯ ಸಮಗ್ರ ಅಭಿವೃದ್ಧಿ ನಮ್ಮ ಉದ್ದೇಶ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry