ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿವಿಧೆಡೆ ಅಂಬೇಡ್ಕರ್‌ ಜಯಂತಿ

Published 14 ಏಪ್ರಿಲ್ 2024, 16:22 IST
Last Updated 14 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಯನ್ನು ಭಾನುವಾರ ನಗರದ ವಿವಿಧೆಡೆ ವಿವಿಧ ಸಂಘಟನೆಗಳು, ಸರ್ಕಾರಿ ಸಂಸ್ಥೆಗಳು ಸಂಭ್ರಮದಿಂದ ಆಚರಿಸಿದವು.

ಬಿಬಿಎಂಪಿ: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕೆ. ಹರೀಶ್ ಕುಮಾರ್, ಪ್ರೀತಿ ಗೆಹಲೋತ್, ವಲಯ ಆಯುಕ್ತರಾದ ರಮ್ಯಾ, ಶಿವಾನಂದ ಕಾಪಶಿ, ಸ್ನೇಹಲ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮಿದೇವಿ ಉಪಸ್ಥಿತರಿದ್ದರು.

ಪೀಣ್ಯ ದಾಸರಹಳ್ಳಿ: ‘ಸಂವಿಧಾನಾತ್ಮಕವಾದ ಕಾನೂನುಗಳ ಮೂಲಕ ಹಿಂದುಳಿದ ವರ್ಗಗಳನ್ನು ಮೇಲೆತ್ತಿದ ಮಹಾ ನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಎಂದು ಸಾಹಿತಿ ವೈ.ಬಿ.ಎಚ್.ಜಯದೇವ್ ತಿಳಿಸಿದರು.

ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ಗೌರವಾಧ್ಯಕ್ಷ ಗುರುನಾಥ್, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ, ಸುರೇಶ್ ಬಿರಾದಾರ್, ಕಾದಂಬರಿಗಾರ್ತಿ ಭಾರತಿ ವೈ.ಕೋಕಲೆ, ಕವಯಿತ್ರಿ ಗೀತಾ ಭಾಗವಹಿಸಿದ್ದರು.

ಬಾಗಲಗುಂಟೆ: ‘ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ಸಮಾನತೆಯ ಹರಿಕಾರರಾದವರು ಬಾಬಾ ಸಾಹೇಬ್ ಅಂಬೇಡ್ಕರ್’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಬಾಗಲಗುಂಟೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಎಸ್ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ.ಜಿ. ಗಂಗಾಧರ್, ಎಂ. ಮುನಿರಾಜು, ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಟಿ. ಶಿವಕುಮಾರ್, ಪಿ.ಎಚ್. ರಾಜು, ಪಾಂಡುರಂಗ ರಾವ್, ಬಿ. ಕೃಷ್ಣಮೂರ್ತಿ, ಗುರುಪ್ರಸಾದ್, ಕೇಬಲ್ ಜಗದೀಶ್, ನಾಣಯ್ಯ, ವಿನೋದ್ ಗೌಡ, ರಘು, ಗಿರಿಜಾ, ಸುಜಾತ ಭಾಗವಹಿಸಿದ್ದರು.

ಕೆ.ಆರ್.ಪುರ: ಶ್ರೇಷ್ಠ ಸಂವಿಧಾನವನ್ನು‌ ಭಾರತಕ್ಕೆ ರೂಪಿಸಿ ಕೊಟ್ಟ ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಅವರು ದಿನ ದಲಿತರಿಗಾಗಿ ಕಾನೂನು ರಚಿಸಿ ನ್ಯಾಯದ ಕಲ್ಪನೆಗೆ ಅಡಿಗಲ್ಲು ಹಾಕಿದರು ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕಿ ಮಂಜುಳಾ ಲಿಂಬಾವಳಿ, ನಗರ ಮಂಡಲ ಅಧ್ಯಕ್ಷರಾದ ಮನೋಹರ ರೆಡ್ಡಿ, ಎಸ್. ಸಿ. ಮೋರ್ಚಾ ಅಧ್ಯಕ್ಷ ರಮೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎನ್. ನಟರಾಜ್, ವೆಂಕಟರಮಣಪ್ಪ (ಪಾಪಣ್ಣ), ಮುನಿಕೃಷ್ಣಪ್ಪ, ಮಾರಪ್ಪ ಉಪಸ್ಥಿತರಿದ್ದರು.

ರಾಜಾಜಿನಗರ: ಮೂಕನಾಯಕನಿಂದ ಪ್ರಬುದ್ಧ ಭಾರತದವರೆಗಿನ ಹೋರಾಟ ರಾಷ್ಟ್ರದ ಏಕತೆಗಾಗಿ ನಡೆದಿದ್ದು. ರಾಷ್ಟ್ರದ ಮುಖ್ಯವಾಹಿನಿಗೆ ಶೋಷಿತರನ್ನು ತರುವುದು ಅಂಬೇಡ್ಕರ್ ಪ್ರಯತ್ನವಾಗಿತ್ತು. ನಾನೊಬ್ಬ ಮೊದಲು ಭಾರತೀಯ ಆನಂತರವೂ ಭಾರತೀಯ ಎಂದಂತಹ ಮಹಾನ್ ನಾಯಕನನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ರಾಜಾಜಿನಗರದ ಕೆ.ಎಲ್.ಇ. ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT