ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಾಹ್ಮಣ ಧರ್ಮ ಪಾಲನೆಯಾಗಲಿ: ಅಲ್ಕಾ ಇನಾಮ್‌ದಾರ್‌

‘ಅಭಿಜಾತೆ–2024’ ರಾಜ್ಯ ತೃತೀಯ ವಿಪ್ರ ಮಹಿಳಾ ಸಮ್ಮೇಳನದಲ್ಲಿ ಅಲ್ಕಾ ಇನಾಮ್‌ದಾರ್‌ ಪ್ರಶ್ನೆ
Published 7 ಜನವರಿ 2024, 20:44 IST
Last Updated 7 ಜನವರಿ 2024, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದವರಿಗೆ ತಮ್ಮದೇ ಆದ ಕರ್ತವ್ಯಗಳಿರುತ್ತವೆ. ತಮ್ಮದೇ ಆದ ಧರ್ಮ ಇದೆ. ಅವುಗಳನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದೇವೆ ಎಂಬ ಪ್ರಶ್ನೆ ಮೂಡಿದೆ’ ಎಂದು ಚಿಂತಕಿ ಅಲ್ಕಾ ಇನಾಮದಾರ್‌ ಸಂದೇಹ ವ್ಯಕ್ತಪಡಿಸಿದರು.

ನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ‘ಅಭಿಜಾತೆ–2024’ ತೃತೀಯ ವಿಪ್ರ ಮಹಿಳಾ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಧರ್ಮ ಎಂದರೆ ಕರ್ತವ್ಯ. ರಾಜಧರ್ಮ, ಪ್ರಜಾಧರ್ಮ, ಪಿತೃಧರ್ಮ, ಪುತ್ರಧರ್ಮ... ಹೀಗೆ ಎಲ್ಲರಿಗೂ ಅವರದ್ದೇ ಆದ ಕರ್ತವ್ಯಗಳಿರುತ್ತವೆ. ವಿಪ್ರವರ್ಣದವರಿಗೂ ಕರ್ತವ್ಯಗಳಿವೆ. ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡಿ ಸಮಾಜವನ್ನು ರಕ್ಷಿಸಿ, ಸರಿಯಾದ ದಾರಿಯಲ್ಲಿ ಒಯ್ಯುವವರೇ ಪುರೋಹಿತರು’ ಎಂದು ಬಣ್ಣಿಸಿದರು.

‘ಆದರೆ, ನಮ್ಮ ವೇಷಭೂಷಣ, ಭಾಷೆ, ಆಚಾರ, ವಿಚಾರ ನಮ್ಮ ಧರ್ಮಕ್ಕೆ ಅನುಗುಣವಾಗಿ ನಡೆಯುತ್ತಿದೆಯೇ ಎಂದು ಅವಲೋಕನ ಮಾಡಿಕೊಳ್ಳಬೇಕು. ಎಷ್ಟು ಮನೆಗಳಲ್ಲಿ ಮಕ್ಕಳು ಮಮ್ಮಿ, ಡ್ಯಾಡಿ ಎಂದು ಹೆತ್ತವರನ್ನು ಕರೆಯುತ್ತಾರೆ? ಮುಕ್ತಕೇಶರಾಗಿ ಹೆಣ್ಣುಮಕ್ಕಳು ಓಡಾಡುತ್ತಿದ್ದಾರೆ., ಲಜ್ಜಾ ರಕ್ಷಣೆಗಾಗಿ ವಸ್ತ್ರ ಇದೆ ಎಂಬುದನ್ನು ಮರೆತು ವೇಷಭೂಷೆಯನ್ನು ಮಾಡುತ್ತಿದ್ದಾರೆ ಎಂಬುದುನ್ನು ಯೋಚಿಸಬೇಕು’ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್‌. ಗೌರಿಶಂಕರ್‌, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಲ್‌.ಎ. ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್‌, ಸಿ.ಕೆ. ರಾಮಮೂರ್ತಿ, ‘ಅಭಿಜಾತೆ’ ಕಾರ್ಯಾಧ್ಯಕ್ಷೆ ಮೇದಿನಿ ಉದಯ್‌ ಗರುಡಾಚಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT