ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಆರು ಕೃತಿಗಳು ಆಯ್ಕೆ

Published 17 ಮೇ 2024, 19:46 IST
Last Updated 17 ಮೇ 2024, 19:46 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ನೀಡುವ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಆರು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 

ಎಚ್.ಎಸ್.ಎಂ. ಪ್ರಕಾಶ್ ಅವರ ‘ನಮ್ಮಂಥ ಬಲ್ಲಿದವರು’ (ಅನುವಾದ), ಎಚ್.ಟಿ. ಪೋತೆ ಅವರ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’ (ಪ್ರವಾಸ ಕಥನ), ಫಾತಿಮಾ ರಲಿಯಾ ಅವರ ‘ಒಡೆಯಲಾರದೆ ಒಡಪು’ (ಕಥಾ ಸಂಕಲನ), ಸಂತೋಷ ನಾಯಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ (ಕವನ ಸಂಕಲನ), ಇಂದಿರಾ ಕೃಷ್ಣಪ್ಪ ಅವರ ‘ಸಾವಿತ್ರಿ ಬಾ ಫುಲೆ’ (ವ್ಯಕ್ತಿ ಚಿತ್ರಣ) ಹಾಗೂ ಎಂ.ಎಸ್. ಮಣಿ ಅವರ ‘ಗವಿಮಾರ್ಗ’ (ಲೇಖನ ಸಂಕಲನ) ಕೃತಿಯು ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಆಯ್ಕೆಯಾಗಿದೆ. 

ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿಗೆ 150 ಕೃತಿಗಳು ಬಂದಿದ್ದವು. ಅವುಗಳಲ್ಲಿ ಅತ್ಯುತ್ತಮವಾದ ಆರು ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ 31ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT