ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪ್ಪಗೌಡಗೆ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’

Published 2 ಮೇ 2024, 15:51 IST
Last Updated 2 ಮೇ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಗೆಳೆಯರ ಬಳಗ ನೀಡುವ 2024ನೇ ಸಾಲಿನ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ಗೆ ಸಂಶೋಧಕ ಡಿ.ಎಸ್. ಜಯಪ್ಪಗೌಡ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ₹5 ಸಾವಿರ ನಗದು ಒಳಗೊಂಡಿದೆ. ಸಂಶೋಧಕ ಎಂ. ಚಿದಾನಂದಮೂರ್ತಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ‌

ಮೈಸೂರಿನ ಜಯಪ್ಪಗೌಡ ಅವರು ಸಂಶೋಧನೆ, ಇತಿಹಾಸ, ಹಸ್ತಪ್ರತಿ, ಶಾಸನ, ಅನುವಾದ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ಸಹಾಯಕರಾಗಿರುವ ಅವರು, ‘ಕರ್ನಾಟಕ ಕಡಲಾಚೆಯ ಸಂಬಂಧಗಳು’, ‘ಮೂಡಿಗೆರೆ ತಾಲ್ಲೂಕಿನ 5 ಶಾಸನಗಳ ಶೋಧ’, ‘ಮೈಸೂರು ಒಡೆಯರ್’ ಸೇರಿ ವಿವಿಧ ಗ್ರಂಥಗಳನ್ನು ರಚಿಸಿದ್ದಾರೆ. 

ಚಿದಾನಂದಮೂರ್ತಿ ಅವರ ಜನ್ಮದಿನವಾದ ಮೇ 10ರಂದು ಮೈಸೂರಿನ ಸರಸ್ವತಿಪುರದಲ್ಲಿರುವ ಜಯಪ್ಪಗೌಡ ಅವರ ಸ್ವಗೃಹದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಶೋಧಕ ಆರ್. ಶೇಷಶಾಸ್ತ್ರಿ ಅಧ್ಯಕ್ಷತೆ ವಹಿಸುತ್ತಾರೆ. ಸ.ರ. ಸುದರ್ಶನ, ಕ್ಯಾತನಹಳ್ಳಿ ರಾಮಣ್ಣ, ವ.ಚ. ಚನ್ನೆಗೌಡ ಮತ್ತು ಸ್ಮಿತಾ ರೆಡ್ಡಿ ಉಪಸ್ಥಿತರಿರುತ್ತಾರೆ ಎಂದು ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT