ನಾನಿರುವ ಪಿ.ಜಿಯಲ್ಲಿ ಯಾವುದೇ ಕಡ್ಡಾಯ ದಾಖಲೆ ಪ್ರಮಾಣಪತ್ರಗಳನ್ನು ಪ್ರದರ್ಶಿಸಿಲ್ಲ. ನಿಲಯಪಾಲಕರಾಗಲಿ, ಮಾಲೀಕರಾಗಲಿ ಕಾಣುವುದಿಲ್ಲ. ಹಿಂದಿ ಮಾತನಾಡುವ ಸೇವಾಕರ್ತನೇ ಅವರ ಸಂಪರ್ಕಾಧಿಕಾರಿ. ಯಾರನ್ನು ಪ್ರಶ್ನಿಸೋದು? ಜಿಬಿಎ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ.
– ಯುವರಾಜ್, ಅಕೌಂಟೆಂಟ್
150ಕ್ಕೂ ಹೆಚ್ಚಿನ ನಿವಾಸಿಗಳಿರುವ ಪಿ.ಜಿಯಲ್ಲಿ ವಾಸವಿದ್ದೇನೆ. ತರಕಾರಿ, ಕಾಳು, ಅಕ್ಕಿ ಇತ್ಯಾದಿಗಳನ್ನು ತೊಳೆಯದೆ ಅಡುಗೆ ಮಾಡುತ್ತಾರೆ. ಅಡುಗೆ ಮನೆಯಲ್ಲಿ ಜಿರಳೆ ಮತ್ತು ಇಲಿಗಳು ಓಡಾಡುತ್ತವೆ. ಆರೋಗ್ಯ ಕೆಡಿಸಿಕೊಳ್ಳಲು ಹಣ ವ್ಯಯಿಸುವಂತಾಗಿದೆ.
– ರುಚಿತಾ, ಕಾಲೇಜು ವಿದ್ಯಾರ್ಥಿನಿ
ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ಪಿ.ಜಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.