ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಏಳು ದಿನದಲ್ಲಿ 447 ಮರ ಧರೆಗೆ; 1573 ಸ್ಥಳಗಳಲ್ಲಿ ಕಟ್ಟಡತ್ಯಾಜ್ಯ

Published 8 ಜೂನ್ 2024, 0:06 IST
Last Updated 8 ಜೂನ್ 2024, 0:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜೂನ್‌ 2ರಿಂದ ಭಾರಿ ಗಾತ್ರದ ನೂರಾರು ಮರಗಳು ಧರೆಗುರುಳಿದ್ದು, ಬೃಹತ್ ಕ್ರೇನ್‌ಗಳನ್ನು ಬಳಸಿ, ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಅವುಗಳನ್ನು ತೆರವು ಮಾಡುತ್ತಿದ್ದಾರೆ.

ಅರಣ್ಯ ವಿಭಾಗದಿಂದ ಮರ ತೆರವುಗೊಳಿಸುವ 39 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ 4 ದ್ವಿಚಕ್ರ ತಂಡಗಳಿಂದಲೂ ಬಿದ್ದಿರುವ ಮರಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ವಲಯವಾರು ಹೆಚ್ಚುವರಿ ಮರ ತೆರವು ತಂಡಗಳು, ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿದೆ. ದೊಡ್ಡ ಮರಗಳನ್ನು ತೆರವುಗೊಳಿಸಲು 11 ಕ್ರೇನ್, 2 ಜೆಸಿಬಿ ಹಾಗೂ ಮರ ಕಟಾವು ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗಿದೆ. ವಾರ್ಡ್‌ಗಳಲ್ಲಿರುವ ಟ್ರ್ಯಾಕ್ಟರ್‌ಗಳಿಂದ ಕಟಾವು ಮಾಡಿರುವ ಮರದ ದಿಮ್ಮಿ, ಕೊಂಬೆಗಳನ್ನು ಡಂಪಿಂಗ್ ಯಾರ್ಡ್‌ಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಟ್ರ್ಯಾಕ್ಟರ್ ಬಳಕೆ: ಮರಗಳು ಧರೆಗುರುಳಿರುವ ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯ, ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿರುವ ತ್ಯಾಜ್ಯವನ್ನು ಆಯಾ ವಲಯಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ‌ತೆರವುಗೊಳಿಸಲಾಗುತ್ತಿದೆ.

ಬೃಹತ್ ಮರಗಳು‌ ಧರೆಗುರುಳಿರುವ ಕಡೆ ಮರ ಕಟಾವು ಯಂತ್ರದ ಮೂಲಕ ಕತ್ತರಿಸಿ, ಚಿಕ್ಕ-ಚಿಕ್ಕ ರೆಂಬೆ, ಎಲೆಗಳು ರಸ್ತೆ ಬದಿ, ಪಾದಚಾರಿ ಮಾರ್ಗ ಅಥವಾ ಸ್ಥಳದಲ್ಲೇ ಇವೆ. ಇದರಿಂದ ನಾಗರಿಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದರೆ ಪಾಲಿಕೆ ಉಚಿತ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಲಾಗಿದೆ.

447 ಮರ ಧರೆಗೆ: ನಗರದಲ್ಲಿ ಜೂನ್‌ 2ರಿಂದ ಜೂನ್‌ 7ರವರೆಗೆ 447 ಮರಗಳು ಬಿದ್ದಿವೆ. ಇದರಲ್ಲಿ ಇನ್ನೂ 71 ಮರಗಳನ್ನು ತೆರವು ಮಾಡಬೇಕಿದೆ. ದಕ್ಷಿಣ ವಲಯದಲ್ಲಿ ಅತಿಹೆಚ್ಚು 136 ಮರಗಳು ಧರೆಗುರುಳಿವೆ. ಪಶ್ಚಿಮದಲ್ಲಿ 132, ದಾಸರಹಳ್ಳಿ 47 ಮರಗಳು ಉರುಳಿಬಿದ್ದಿವೆ. 1,126 ಕೊಂಬೆಗಳು ಬಿದ್ದು, 140 ತೆರವಾಗಬೇಕಿದೆ. 

ನಗರದ 1,573 ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ಬಿದ್ದಿರುವ ಬಗ್ಗೆ  ದೂರುಗಳು ಬಂದಿದ್ದು, ಅದರಲ್ಲಿ 905 ಕಡೆಯಿದ್ದ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ದಕ್ಷಿಣ ವಲಯದಲ್ಲಿ 551, ಪಶ್ಚಿಮದಲ್ಲಿ 456, ಪೂರ್ವದಲ್ಲಿ 138, ಯಲಹಂಕದಲ್ಲಿ 112, ಆರ್‌.ಆರ್‌. ನಗರ ವಲಯದಲ್ಲಿ 94 ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯ ಬಿದ್ದಿದ್ದ ದೂರುಗಳು ಬಂದಿದ್ದವು ಎಂದು ಪ್ರಕಟಣೆ ತಿಳಿಸಿದೆ.

ನಗರದ ಶಿವಾನಂದ ವೃತ್ತದ ಬಳಿ ಮಳೆಯಲ್ಲಿ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಮನೆಗೆ ಹೋದರು
ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ನಗರದ ಶಿವಾನಂದ ವೃತ್ತದ ಬಳಿ ಮಳೆಯಲ್ಲಿ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಮನೆಗೆ ಹೋದರು ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ಮೈಸೂರು ರಸ್ತೆಯ ಮೇಲ್ಸೇತುವೆ ಮೇಲಿಂದ ಮಳೆನೀರು ಹರಿಯಲು ತೊಡಕಾಗಿದ್ದ ಚರಂಡಿಯನ್ನು ಸಂಚಾರ ಪೊಲೀಸರೊಬ್ಬರು ಶುಕ್ರವಾರ ಸಂಜೆ ಸ್ವಚ್ಛಗೊಳಿಸಿದರು
-ಪ್ರಜಾವಾಣಿ ಚಿತ್ರ
ಮೈಸೂರು ರಸ್ತೆಯ ಮೇಲ್ಸೇತುವೆ ಮೇಲಿಂದ ಮಳೆನೀರು ಹರಿಯಲು ತೊಡಕಾಗಿದ್ದ ಚರಂಡಿಯನ್ನು ಸಂಚಾರ ಪೊಲೀಸರೊಬ್ಬರು ಶುಕ್ರವಾರ ಸಂಜೆ ಸ್ವಚ್ಛಗೊಳಿಸಿದರು -ಪ್ರಜಾವಾಣಿ ಚಿತ್ರ
ಹಲವೆಡೆ ಸಾಧಾರಣ ಮಳೆ
ನಗರದಲ್ಲಿ ಶುಕ್ರವಾರ ಸಂಜೆ ಹಲವೆಡೆ ಸಾಧಾರಣವಾಗಿ ಮಳೆಯಾಗಿದೆ. ಕಡಿಮೆ ಮಳೆಯಾಗಿದ್ದರೂ ಹಲವು ರಸ್ತೆಗಳು ಎಂದಿನಂತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಬೆಳ್ಳಂದೂರು ಕೋಡಿ ಯಮಲೂರು ರಸ್ತೆ ಮಾರತ್‌ಹಳ್ಳಿ ತುಳಸಿ ಜಂಕ್ಷನ್‌ ಕಾಡುಬೀಸನಹಳ್ಳಿ ರಾಮಮೂರ್ತಿನಗರ ಕಸ್ತೂರಿನಗರ ರಿಚ್ಮಂಡ್‌ ವೃತ್ತ ವಿಂಡ್ಸರ್‌ ಮ್ಯಾನರ್ ಜಂಕ್ಷನ್‌ ಕ್ವೀನ್ಸ್‌ ರಸ್ತೆಯಲ್ಲಿ ನೀರು ನಿಂತು ವಾಹನದಟ್ಟಣೆ ಉಂಟಾಗಿತ್ತು. ಎಚ್‌. ಗೊಲ್ಲಹಳ್ಳಿಯಲ್ಲಿ 1.5 ಸೆಂ.ಮೀ ಕೋರಮಂಗಲದಲ್ಲಿ 1.4 ಸೆಂ.ಮೀ ಹಂಪಿನಗರದಲ್ಲಿ 1.3 ಸೆಂ.ಮೀ ಚಾಮರಾಜಪೇಟೆಯಲ್ಲಿ 1.2 ಸೆಂ.ಮೀ ದೊರೆಸಾನಿಪಾಳ್ಯ ರಾಜರಾಜೇಶ್ವರಿನಗರ ಕೊನೇನ ಅಗ್ರಹಾರ ಸಂಪಂಗಿರಾಮನಗರದಲ್ಲಿ ತಲಾ 1 ಸೆಂ.ಮೀಟರ್‌ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT