ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀರ್ ಆಸ್ತಿ: ಬಿಜೆಪಿ ವ್ಯಂಗ್ಯ

Last Updated 7 ಜುಲೈ 2022, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಅವರ ಆಸ್ತಿ ಎರಡು ಸಾವಿರ ಪಟ್ಟು ಹೇಗಾಯಿತು ಎಂದು ಬಿಜೆಪಿ ಪ್ರಶ್ನಿಸಿದೆ.

‘ನ್ಯಾಶನಲ್ ಟ್ರಾವೆಲ್ಸ್ ಬಸ್ ಓಡಿಸಿ ಜಮೀರ್ ಆಸ್ತಿ ಈ ಪರಿ ಏರಿಕೆಯಾಗಲು ಹೇಗೆ ಸಾಧ್ಯ’ ಎಂದು ಬಿಜೆಪಿಗುರುವಾರ ಸರಣಿ ಟ್ವೀಟ್‌ ಮಾಡಿದೆ.

‘ಸಿದ್ದರಾಮೋತ್ಸವದ ಗುಂಗಿನಲ್ಲಿರುವ ಸಿದ್ದರಾಮಯ್ಯ ಅವರೇ, ನಿಮ್ಮ ಅತ್ಯಾಪ್ತ ಶಾಸಕ‌ ಜಮೀರ್ ಅಹಮ್ಮದ್‌ ಆಸ್ತಿ ಎರಡು ಸಾವಿರ ಪಟ್ಟು ಹೆಚ್ಚಾಗಿದೆ. ಸಿದ್ದರಾಮೋತ್ಸವ ಸಮಿತಿಯಲ್ಲಿ ಸ್ಥಾನ ಪಡೆದಿರುವ ಜಮೀರ್ ಎಷ್ಟು ಹೂಡಿಕೆ ಮಾಡಿದ್ದಾರೆ? ಜಮೀರ್ ಪರವಾಗಿ ಸಿದ್ದರಾಮಯ್ಯ ಇಷ್ಟು ವಕಾಲತ್ತು ಹಾಕುವುದನ್ನು‌ ನೋಡಿದರೆ ಇದು ಯಾರ ಕಪ್ಪು ಹಣ ಎಂಬ ಪ್ರಶ್ನೆ ಮೂಡುತ್ತಿದೆ!ಜಮೀರ್ ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT