ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಜಾಲತಾಣ ಅನಾವರಣ

Published 9 ಮೇ 2024, 15:10 IST
Last Updated 9 ಮೇ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ಬುಕ್‌ ಬ್ರಹ್ಮ ಆಯೋಜಿಸುತ್ತಿರುವ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ–2024’ ಜಾಲತಾಣವನ್ನು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಹಳ್ಳಿ ಹಾಗೂ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡ ಅನಾವರಣಗೊಳಿಸಿದರು.

ಎರಡೂವರೆ ಸಾವಿರ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ದಕ್ಷಿಣ ಭಾರತದ ಭಾಷೆಗಳ (ತಮಿಳು, ಕನ್ನಡ, ಮಲಯಾಳಂ, ತೆಲುಗು) ನಡುವಿನ ಪರಸ್ಪರ ಸಂಬಂಧವು ಐತಿಹಾಸಿಕ ಮಹತ್ವದಾಗಿದೆ. ಈ ಸಂಬಂಧವನ್ನು ಸಂಭ್ರಮಿಸುವುದಕ್ಕೆ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಆಯೋಜಿಸಲಾಗುತ್ತಿದೆ.

ಭಾರತದಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಆ ಪೈಕಿ ದಕ್ಷಿಣ ಭಾರತದ ಸಾಹಿತ್ಯವು ‘ಸಿಲಪ್ಪದಿಗಾರಂ’, ’ಆದಿಪುರಾಣ’, ’ರಾಮಚರಿತಂ’, ’ಆಂಧ್ರ ಮಹಾಭಾರತಂ’ ’ತಿರುನಿಝಲ್ಮಲಾ’ ಕಾವ್ಯಗಳ ಮೂಲಕ ಶ್ರೀಮಂತ ಪರಂಪರೆಗೆ ನಾಂದಿ ಹಾಡಿತು. ಹಾಗೆಯೇ ಹಲವಾರು ಆಧುನಿಕ ಕೃತಿಗಳು ಕೂಡ ಆಯಾ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿವೆ. 56 ಜನ ಜ್ಞಾನಪೀಠ ಪುರಸ್ಕೃತರ ಪೈಕಿ ಈ ಭಾಗದ 19 ಜನ ಕವಿ-ಲೇಖಕರಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯಾಸಕ್ತರು ಮತ್ತು ಲೇಖಕರು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ’ ನಡೆಯಲಿದೆ. ಇದರಲ್ಲಿ ಪ್ರಕಾಶಕರು, ಓದುಗರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಉತ್ಸವ ಆಯೋಜಕರು ತಿಳಿಸಿದರು.

ಜಾಲತಾಣ ಅನಾವರಣ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಆಕೃತಿಯ ಗುರುಪ್ರಸಾದ್ ಹೆಜ್ಜಾಜಿ, ಲೇಖಕಿ ಡಾ. ವಸುಂಧರಾ ಭೂಪತಿ, ಹೇಮಾ ಪಟ್ಟಣಶೆಟ್ಟಿ, ಜಮೀಲ ಸಾವಣ್ಣ, ಅಭಿನವ ರವಿಕುಮಾರ್, ಜಯಲಕ್ಷ್ಮಿ ಪಾಟೀಲ್, ಅಯೋಧ್ಯ ಪ್ರಕಾಶನದ ಶಂಕರ್, ಭಾವನ ಬೆಳಗೆರೆ, ಪದ ಪ್ರಕಾಶನದ ಧಾಮಿನ, ಕಾವ್ಯ ಪ್ರಕಾಶನದ ರಾಜಲಕ್ಷ್ಮಿ, ಲೇಖಕ ಕಗ್ಗೆರೆ ಪ್ರಕಾಶ್, ಸ್ನೇಹ ಬುಕ್‌ ಹೌಸ್‌ನ ಪರಶಿವಯ್ಯ, ಕದಂಬ ಪ್ರಕಾಶನದ ನಾಗೇಶ್, ಹರಿವು ಬುಕ್ಸ್‌ನ ರತೀಶ್, ಪ್ರೀಸಂನ ಪ್ರಾಣೇಶ್, ವಸಂತ ಪ್ರಕಾಶನದ ಮುರಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT