ಬಾರದ ಪ್ರಯಾಣಿಕರು; ಮೆಜೆಸ್ಟಿಕ್‌ಗೆ ಬಸ್‌ಗಳ ಸ್ಥಳಾಂತರ

7
ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕದ ಸಾರಿಗೆ ಇಲಾಖೆ; ಆರೋಪ

ಬಾರದ ಪ್ರಯಾಣಿಕರು; ಮೆಜೆಸ್ಟಿಕ್‌ಗೆ ಬಸ್‌ಗಳ ಸ್ಥಳಾಂತರ

Published:
Updated:

ಬೆಂಗಳೂರು: ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣದಿಂದ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮೊದಲಿನಂತೆ ಮೆಜೆಸ್ಟಿಕ್‌ ಕೆಂಪೇಗೌಡ ನಿಲ್ದಾಣದಿಂದಲೇ ಚಲಾಯಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕೆಎಸ್‌ಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ), ‘ಸೆಪ್ಟೆಂಬರ್ 10ರಿಂದ ಬಸ್‌ಗಳೆಲ್ಲವೂ ಮೆಜೆಸ್ಟಿಕ್‌ನ ನಿಲ್ದಾಣದಿಂದಲೇ ಕಾರ್ಯಾಚರಣೆ ಆರಂಭಿಸಲಿವೆ. ಈ ಸಂಬಂಧ, ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ನಿರ್ದೇಶನ ನೀಡಿದ್ದಾರೆ’ ಎಂದಿದ್ದಾರೆ.

‘60 ಮಾರ್ಗಗಳ ಬಸ್‌ಗಳು, ಏಪ್ರಿಲ್ 12ರಿಂದ ಪೀಣ್ಯ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿದ್ದವು. ಈ ನಿಲ್ದಾಣದಿಂದ ಪ್ರಯಾಣಿಸುವರ ಸಂಖ್ಯೆ ತೀರಾ ವಿರಳವಾಗಿದೆ. ಖಾಸಗಿ ಕಂಪನಿ ಬಸ್‌ನವರು, ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತಲ ಸ್ಥಳಗಳಿಂದಲೇ ಇಂದಿಗೂ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯಾಣಿಕರನ್ನು ಆಕರ್ಷಿಸುತ್ತಿದ್ದಾರೆ. ಹೀಗಾಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಮೆಜೆಸ್ಟಿಕ್‌ನಿಂದಲೇ ಕಾರ್ಯಾಚರಣೆ ಆರಂಭಿಸಲಿವೆ’ ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು, ‘ಸಾರಿಗೆ ನಿಗಮ ಹಾಗೂ ಖಾಸಗಿ ಕಂಪನಿ ಬಸ್‌ಗಳನ್ನೆಲ್ಲ ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿತ್ತು. ಅದನ್ನು ನಂಬಿ, ನಮ್ಮ ಬಸ್‌ಗಳನ್ನು ಸ್ಥಳಾಂತರ ಮಾಡಿದ್ದೆವು. ಇತ್ತ ನಗರದೊಳಗೆ ಎಂದಿನಂತೆ ಖಾಸಗಿ ಬಸ್‌ಗಳು ಓಡಾಡುತ್ತಿದ್ದು, ಅದಕ್ಕೆ ಸಾರಿಗೆ ಇಲಾಖೆ ಕಡಿವಾಣ ಹಾಕಲಿಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !