ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಚಿತ್ರ ಉತ್ಸವ: ನಾಲ್ವರಿಗೆ ಪ್ರಶಸ್ತಿ

Last Updated 22 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವ್ಯಂಗ್ರಚಿತ್ರಗಾರರ ಸಂಸ್ಥೆಯು 2022ರ ಜ.1ರಂದು ನಗರದಲ್ಲಿ ‘ವ್ಯಂಗ್ಯಚಿತ್ರ ಉತ್ಸವ–2022’ ಆಯೋಜಿಸಿದೆ. ಜೀವಮಾನದ ಸಾಧನೆ ಮಾಡಿದ ವ್ಯಂಗ್ಯಚಿತ್ರಗಾರರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ರಾಜ್ಯದ ನಾಲ್ವರು ಆಯ್ಕೆಯಾಗಿದ್ದಾರೆ.

ಚತ್ತೀಸ್‌ಗಡದ ‘ಕಾರ್ಟೂನ್ ವಾಚ್‌’ ಮಾಸಿಕ ಪತ್ರಿಕೆ ಸಹಯೋಗದಲ್ಲಿ ಕಾರ್ಟೂನ್ ಗ್ಯಾಲರಿಯಲ್ಲಿ ಉತ್ಸವ ನಡೆಯಲಿದೆ. ವ್ಯಂಗ್ಯಚಿತ್ರಕಾರರಾದ ಕೆ.ಆರ್.ಸ್ವಾಮಿ, ವಿ.ಜಿ.ನರೇಂದ್ರ, ಬಿ.ಜಿ.ಗುಜ್ಜಾರಪ್ಪ ಮತ್ತು ಜಿ.ಎಸ್.ನಾಗನಾಥ ಅವರು ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

‘ಬಿ.ಜಿ.ಗುಜ್ಜಾರಪ್ಪ, ವೈ.ಎಸ್.ನಂಜುಂಡಸ್ವಾಮಿ, ರಾ.ಸೂರಿ, ಚಂದ್ರನಾಥ ಆಚಾರ್ಯ, ಸತೀಶ್ ಆಚಾರ್ಯ, ಜಿ.ಎಸ್.ನಾಗನಾಥ, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್, ಸುಭಾಶ್ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದಕಟ್ಟೆ, ಚಂದ್ರ ಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚ ಬೊಳ್ಕಟ್ಟೆ, ಪ್ರಸನ್ನ ಕುಮಾರ್ ಮತ್ತು ಎಂ.ಎನ್.ದತ್ತಾತ್ರಿ ಸೇರಿ 21 ಕಲಾವಿದರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಭಾರತೀಯ ಕಾರ್ಟೂನಿಸ್ಟ್ ಸಂಸ್ಥೆಯ ವ್ಯವಸ್ಥಾಪನಾ ಟ್ರಸ್ಟಿ ವಿ.ಜಿ.ನರೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT