ಭಾನುವಾರ, ಅಕ್ಟೋಬರ್ 25, 2020
28 °C

ಆಮಂತ್ರಣ ನೀಡುವ ಸೋಗಿನಲ್ಲಿ ಸರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಮಂತ್ರಣ ನೀಡುವ ಸೋಗಿನಲ್ಲಿ ಮನೆಗೆ ತೆರಳಿದ್ದ ಕಳ್ಳನೊಬ್ಬ, ಸರೋಜಾ ಎಂಬುವರ ಚಿನ್ನ ಸರ ಕದ್ದುಕೊಂಡು ಪರಾರಿಯಾಗಿದ್ದಾನೆ. ಸುಬ್ರಮಣ್ಯಪುರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.  

‘ಪರಿಚಯಸ್ಥನೆಂದು ಹೇಳಿಕೊಂಡು ಮನೆಗೆ ಬಂದಿದ್ದ ಆರೋಪಿ, ಗೃಹಪ್ರವೇಶದ ಆಮಂತ್ರಣ ಪತ್ರದ ಜೊತೆ ನಕಲಿ ಬೆಳ್ಳಿ ನಾಣ್ಯವನ್ನು ಸರೋಜಾ ಅವರಿಗೆ ಕೊಟ್ಟಿದ್ದ. ಗೃಹಪ್ರವೇಶಕ್ಕೆ ಬರುವವರಿಗೆ ಚಿನ್ನದ ಪದಕ ನೀಡುವುದಾಗಿ ಹೇಳಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ಚಿನ್ನದ ಸರ ನೋಡಿದ್ದ ಆರೋಪಿ, ‘ಸರ ಚೆನ್ನಾಗಿದೆ. ಇದೇ ರೀತಿಯಲ್ಲೇ ನಾನು ಸರ ಮಾಡಿಸಬೇಕಿದೆ. ನೋಡಿ ಕೊಡುತ್ತೇನೆ’ ಎಂದು ಸರ ಪಡೆದಿದ್ದ. ಅದೇ ಸಂದರ್ಭದಲ್ಲೇ ಮನೆಗೆ ಬಂದಿದ್ದ ಗ್ಯಾಸ್ ಏಜೆನ್ಸಿ ಸಿಬ್ಬಂದಿ. ಸಿಲಿಂಡರ್ ನೀಡಿದ್ದರು. ಅದನ್ನು ಅಡುಗೆ ಮನೆಗೆ ಮಹಿಳೆ ತೆಗೆದುಕೊಂಡು ಹೋಗಿದ್ದಾಗ ಆರೋಪಿ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.