ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸಿಐಡಿ ದಾಳಿ; 9 ನಕ್ಷತ್ರ ಆಮೆ ರಕ್ಷಣೆ

Published 24 ಮೇ 2024, 0:20 IST
Last Updated 24 ಮೇ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಹಾಗೂ ಪಂತರಪಾಳ್ಯದಲ್ಲಿರುವ ಎರಡು ಸ್ಥಳಗಳ ಮೇಲೆ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ್ದು, 9 ನಕ್ಷತ್ರ ಆಮೆಗಳನ್ನು ರಕ್ಷಿಸಿದ್ದಾರೆ.

‘ಕೋರಮಂಗಲದ ಬಿಲಿನಿಯರ್ ಸ್ಟ್ರೀಟ್‌ನಲ್ಲಿರುವ ಉದ್ಯಮಿ ರೋಹಿ ಅವರ ಮನೆಯಲ್ಲಿ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಇಟ್ಟುಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆಮೆಗಳನ್ನು ರಕ್ಷಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಮನೆಯ ಮೇಲ್ವಿಚಾರಕ ಬಾಲಾಜಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನಕ್ಷತ್ರ ಆಮೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ. ವ್ಯವಹಾರದಲ್ಲಿ ಲಾಭವಾಗಿ ಆದಾಯ ದುಪ್ಪಟ್ಟಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ’ ಎಂಬುದಾಗಿ ಜ್ಯೋತಿಷಿಯೊಬ್ಬರು ಹೇಳಿದ್ದರು. ಈ ಮಾತು ನಂಬಿದ್ದ ಉದ್ಯಮಿ, ಮನೆಯಲ್ಲಿ ನಕ್ಷತ್ರ ಆಮೆಗಳನ್ನು ಇರಿಸಿಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.’

‘ನಕ್ಷತ್ರ ಆಮೆಗಳನ್ನು ಎಲ್ಲಿಂದ ತಂದಿದ್ದರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಮನೆಯಲ್ಲಿದ್ದ ಬಾಲಾಜಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮಾಲೀಕ ರೋಹಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ತಿಳಿಸಿವೆ.

‘ಪಂತರಪಾಳ್ಯದಲ್ಲೂ ಸ್ಥಳವೊಂದರ ಮೇಲೆ ದಾಳಿ ಮಾಡಿ, ಕಾರ್ತಿಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರ ಬಳಿಯಿಂದಲೂ ನಕ್ಷತ್ರ ಆಮೆಗಳನ್ನು ರಕ್ಷಿಸಲಾಗಿದೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT