7

ಶ್ರಮ, ಸಾಧನೆಯಿಂದ ಕೀರ್ತಿ: ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯ

Published:
Updated:

ಬೆಂಗಳೂರು: 'ಪ್ರಪಂಚದ ಶೇ 90ಕ್ಕಿಂತ ಹೆಚ್ಚು ವಿಜ್ಞಾನಿಗಳು ಮೂಲತಃ ಬಡತನದಿಂದ ಬಂದವರೇ ಆಗಿದ್ದಾರೆ. ಶ್ರದ್ಧೆ, ಶ್ರಮ, ಸಾಧನೆ ಈ ಮೂರನ್ನು ರೂಡಿಸಿಕೊಂಡರೆ ಪ್ರಪಂಚದಲ್ಲೇ ಹೆಚ್ಚು ಜನಪ್ರಿಯ ವ್ಯಕ್ತಿಯಾಗಬಹುದು' ಎಂದು ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರು ಅಭಿಪ್ರಾಯಪಟ್ಟರು.

ಪೀಣ್ಯದಾಸರಹಳ್ಳಿ ಸಮೀಪ ಹಾವನೂರು ಬಡಾವಣೆಯ ಸೌಂದರ್ಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ 'ರಜತ ಸೌಂದರ್ಯ-2018'ನ್ನು ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.

'ಭಾರತಕ್ಕೆ ಮ್ಯಾನೇಜ್‌ಮೆಂಟ್ ಪದವೀಧರರಿಗಿಂತ ಚೀನಾ, ಕೊರಿಯಾ, ಜಪಾನ್ ದೇಶಗಳಲ್ಲಿರುವ ಶ್ರಮಜೀವಿಗಳು ಬೇಕು. ಹಾಗೆಯೇ ಮಕ್ಕಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ, ಅರಿವು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !