ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ: ಚಿಕಿತ್ಸಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸಮಾವೇಶ

Published 3 ಮಾರ್ಚ್ 2024, 19:23 IST
Last Updated 3 ಮಾರ್ಚ್ 2024, 19:23 IST
ಅಕ್ಷರ ಗಾತ್ರ

ಯಲಹಂಕ: ಸಹಕಾರನಗರದ ಲೈಫ್‌ಕೇರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮಧುಮೇಹ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದಂತೆ ‘ಐಲೆಟ್‌–2024’ ಸಮಾವೇಶ ನಡೆಯಿತು.

ಸಮಾವೇಶದಲ್ಲಿ ಕರ್ನಾಟಕದ 500 ವೈದ್ಯರೂ ಸೇರಿದಂತೆ ವಿವಿಧ ತಜ್ಞರು ಹಾಗೂ ಆರೋಗ್ಯ ವಲಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಹೃದ್ರೋಗ ಸಮಸ್ಯೆಯೂ ಸೇರಿದಂತೆ ಇತರೆ ಆರೋಗ್ಯ ಸೇವೆಗಳ ಕುರಿತು ವಿಚಾರ ವಿನಿಮಯ, ಪ್ರಬಂಧ ಮಂಡನೆ ಹಾಗೂ ಕಾರ್ಯಾಗಾರಗಳು ನಡೆದವು. ಅಲ್ಲದೆ ಹೃದ್ರೋಗ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

ಸಮಾವೇಶದ ಸಂಘಟನಾ ಕಾರ್ಯದರ್ಶಿ ಎಲ್‌.ಶ್ರೀನಿವಾಸಮೂರ್ತಿ ಮಾತನಾಡಿ, ವೈದ್ಯಕೀಯ ಲೋಕದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮತ್ತು ಮಾರ್ಪಾಡುಗಳು, ನೂತನ ಚಿಕಿತ್ಸಾ ಕ್ರಮಗಳು, ಹೊಸದಾಗಿ ಆವಿಷ್ಕಾರ ಆಗುತ್ತಿರುವ ಔಷಧಿಗಳು, ಹೃದಯ, ಕಿಡ್ನಿ, ಮಧುಮೇಹ ಹಾಗೂ ಸ್ಥೂಲಕಾಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ರೋಗಿಗಳ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಇಂಡಿಯನ್‌ ಕಾಲೇಜ್‌ ಆಫ್‌ ಫಿಸಿಷಿಯನ್ಸ್‌ನ ಡೀನ್‌ ಜ್ಯೋತಿರ್‌ ಮೆ ಪಾಲ್‌, ಡಾ.ಶಶಾಂಕ್‌ ಜೋಶಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎ.ಶೇಖರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT