ಭಾನುವಾರ, ಮೇ 22, 2022
26 °C

ಕೋವಿಡ್-19: ಕೇಂದ್ರದಿಂದ ಪ್ರತ್ಯೇಕ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದಾಗಿ ಐಟಿಬಿಟಿ ಸೇರಿದಂತೆ ಹಲವು ಕಂಪನಿ ಗಳು ಮುಂಜಾಗ್ರತಾ ಕ್ರಮವಾಗಿ ತಮ್ಮ ಸಿಬ್ಬಂದಿಗೆ ‘ವರ್ಕ್ ಫ್ರಂ ಹೋಮ್’ ವ್ಯವಸ್ಥೆ ಜಾರಿ ಮಾಡಿದ್ದವು. ಇದೀಗ ಕೋವಿಡ್‌ ಅಬ್ಬರ ಕಡಿಮೆಯಾಗಿದ್ದು, ‘ವರ್ಕ್ ಫ್ರಂ ಹೋಮ್‘ ವ್ಯವಸ್ಥೆ ಬಿಟ್ಟು ಕಚೇರಿ ಕೆಲಸ ಆರಂಭವಾಗುತ್ತಿದೆ.

ಉದ್ಯೋಗಿಗಳು ಕಚೇರಿಗೆ ಹೋಗುವ, ಕಚೇರಿಯಲ್ಲಿ ವಹಿ ಸಬೇಕಾದ ಮುನ್ನೆಚ್ಚರಿಕೆಗೆ ಸಂಬಂ ಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ಸಾಮಾನ್ಯ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸಾಮಾನ್ಯ ಸೂಚನೆಗಳು
* ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
* ಕಚೇರಿಯಲ್ಲಿ ಇರುವ ಸಮಯದಲ್ಲಿ ಮೂಗು, ಬಾಯಿ ಮುಚ್ಚಿರುವಂತೆ ಮಾಸ್ಕ್ ಬಳಕೆ ಕಡ್ಡಾಯ.
* ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪು ಬಳಸಿ ಆಗಾಗ ಕೈ ತೊಳೆಯಬೇಕು.
* ಬಳಸಿದ ಟಿಶ್ಯುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು.
* ಆರೋಗ್ಯ ಸಮಸ್ಯೆಗಳು ಕಂಡುಬಂದರೆ ತಕ್ಷಣ ಕಚೇರಿ ಉಸ್ತುವಾರಿ ವಹಿಸಿ ದವರಿಗೆ ಮಾಹಿತಿ ನೀಡಬೇಕು.
* ಕಚೇರಿ ವ್ಯಾಪ್ತಿಯಲ್ಲಿ ಉಗುಳುವುದು ನಿಷಿದ್ಧ.
* ಕಂಪನಿಯ ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು ಆ್ಯಪ್ ಬಳಸಬೇಕು.

ನಿರ್ದಿಷ್ಟ ಸೂಚನೆಗಳು
* ಕಚೇರಿ ಪ್ರವೇಶದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
* ರೋಗಲಕ್ಷಣಗಳು ಇಲ್ಲದ ವರಿಗೆ ಮಾತ್ರ ಕಚೇರಿಗೆ ಪ್ರವೇಶ
* ಕಂಟೇನ್‌ಮೆಂಟ್‌ ವಲಯ ದಲ್ಲಿರುವ ಉದ್ಯೋಗಿಗಳು ಕಚೇರಿಗೆ ಬರುವಂತಿಲ್ಲ.
* ಕಂಪನಿಯ ಚಾಲಕರು ಕೂಡ ಅಂತರ ಕಾಪಾಡಿಕೊಳ್ಳಬೇಕು
* ದಿನಕ್ಕೆ 2 ಬಾರಿ ಸೋಡಿಯಂ ಹೈಪೋಕ್ಲೋರೈಡ್ ಬಳಸಿ ಕಚೇರಿಯ ನೆಲ ಸ್ವಚ್ಛಗೊಳಿಸ ಬೇಕು
* ಕಚೇರಿಯ ಸಭೆಗಳನ್ನು ಆದಷ್ಟು ವಿಡಿಯೊ ಸಂವಾದದ ಮೂಲಕ ನಡೆಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು