ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಬಾಹಿರ ಚಟುವಟಿಕೆ| ‘218 ‍‍ಪ್ರಕರಣ; 431 ಆರೋಪಿಗಳ ಬಂಧನ‘

ಪೊಲೀಸರ ಕ್ರಮಗಳ ಅಂಕಿ–ಅಂಶ ಬಿಡುಗಡೆ
Published 11 ಜೂನ್ 2024, 15:59 IST
Last Updated 11 ಜೂನ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌)ಗೆ ಸಂಬಂಧಿಸಿದ 26 ಪ್ರಕರಣಗಳು ಸೇರಿದಂತೆ ಒಟ್ಟು 218 ಪ್ರಕರಣಗಳು ದಾಖಲಾಗಿದ್ದು, 431 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಬೆಂಗಳೂರು ನಗರ ಕಮಿಷನರ್ ಬಿ. ದಯಾನಂದ್‌ ಹೇಳಿದರು.

ಮೇ ತಿಂಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಂಕಿ–ಅಂಶಗಳನ್ನು ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬೆಂಗಳೂರು ನಗರ ಕಮಿಷನರ್ ಬಿ. ದಯಾನಂದ

ಬೆಂಗಳೂರು ನಗರ ಕಮಿಷನರ್ ಬಿ. ದಯಾನಂದ

‘ಮೇ ತಿಂಗಳಲ್ಲಿ ದಾಖಲಾದ ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ, ವಿದೇಶಿ ಪ್ರಜೆಗಳೂ ಸೇರಿದಂತೆ ಒಟ್ಟು 40 ವ್ಯಕ್ತಿಗಳನ್ನು ಬಂಧಿಸಲಾಗಿದೆ. 52 ಕೆ.ಜಿ. ಗಾಂಜಾ, 2 ಕೆ.ಜಿ. ಆಶೀಷ್ ಆಯಿಲ್, 741 ಗ್ರಾಂ ಚರಸ್, 5 ಗ್ರಾಂ ಕೊಕೇನ್, ಎಂಡಿಎಂಎ 1 ಕೆ.ಜಿ. 922 ಗ್ರಾಂ ಹಾಗೂ ಎಲ್‌.ಎಸ್.ಡಿ–07 ಸ್ಟ್ರಿಪ್ಸ್‌ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮುಂಜಾಗ್ರತಾ ಕ್ರಮವಾಗಿ ರೌಡಿಗಳ ವಿರುದ್ಧ ಒಟ್ಟು 59 ಪಿಎಆರ್‌ ಪ್ರಕರಣಗಳನ್ನು ದಾಖಲಿಸಿ, 229ಎ ಐಪಿಸಿ ಕಾಯ್ದೆಯಡಿ ಮೂರು ಪ್ರಕರಣಗಳನ್ನು ಹಾಗೂ 174ಎ ಐಪಿಸಿ ಅಡಿಯಲ್ಲಿ ಒಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿದ್ದ 10 ರೌಡಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಐದು ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ’ ಎಂದರು.

‘ನ್ಯಾಯಾಲಯದಲ್ಲಿ ಒಟ್ಟು 637 ಪ್ರಕರಣಗಳ ವಿಚಾರಣೆ ನಡೆದಿದ್ದು, 426 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಜೆ.ಜೆ. ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 424 ಪ್ರಕರಣಗಳಲ್ಲಿ 501 ಆರೋಪಿಗಳಿಗೆ ದಂಡ ಶುಲ್ಕ ವಿಧಿಸಲಾಗಿದೆ’ ಎಂದು ಹೇಳಿದರು.

‘ಜೆ.ಪಿ. ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ₹35 ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳು ಸೇರಿದಂತೆ ₹1 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ₹95 ಲಕ್ಷದ ಮೌಲ್ಯದ ವಿವಿಧ ಕಂಪನಿಗಳ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ’ ಎಂದರು.

‘₹22.40 ಲಕ್ಷ ಮೌಲ್ಯದ 176 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ’ ಎಂದು ತಿಳಿಸಿದರು.

424 ಪ್ರಕರಣಗಳಲ್ಲಿ 501 ಆರೋಪಿಗಳಿಗೆ ದಂಡ ಶುಲ್ಕ ತಲೆ ಮರೆಸಿಕೊಂಡಿದ್ದ 10 ರೌಡಿಗಳ ಪತ್ತೆ ₹22.40 ಲಕ್ಷ ಮೌಲ್ಯದ 176 ಮೊಬೈಲ್‌ಗಳು ವಶಕ್ಕೆ

2024ರ ಮೇ ತಿಂಗಳಲ್ಲಿ ದಾಖಲಾದ ಪ್ರಕರಣಗಳ ಅಂಕಿ–ಅಂಶ ಕಾನೂನು ಬಾಹಿರ ಚಟುವಟಿಕೆಗಳು;ದಾಖಲಾದ ಪ್ರಕರಣಗಳು;ಬಂಧಿಸಿದ ಆರೋಪಿಗಳು ಮಟ್ಕಾ;02;04 ಜೂಜು;24;182 ಕ್ರಿಕೆಟ್‌ ಬೆಟ್ಟಿಂಗ್;34;69 ಇತರೆ ಬೆಟ್ಟಿಂಗ್‌;02;07 ಅಕ್ರಮ ಮದ್ಯಮರಾಟ;06;06 ಮಾನವ ಕಳ್ಳಸಾಗಣೆ;23;28 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ;01;0 ಬಡ್ಡಿ ವ್ಯವಹಾರ;02;02 ಇಸಿ ಆಕ್ಟ್;06;06 ಕಾಪಿ ರೈಟ್‌ ಆ್ಯಕ್ಟ್;13;08 ಎನ್‌ಡಿಪಿಎಸ್;26;40 ಕೋಟ್ಪಾ;76;79 ಒಟ್ಟು;218;431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT