ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುಗೆ ಹೆಚ್ಚುವರಿ ರಾಜ್ಯಭಾಷೆ ಸ್ಥಾನ: ಸಿಎಂ ಸಿದ್ದರಾಮಯ್ಯ ಭರವಸೆ

Published 25 ನವೆಂಬರ್ 2023, 16:27 IST
Last Updated 25 ನವೆಂಬರ್ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡವು ಕರ್ನಾಟಕದ ಅಧಿಕೃತ ರಾಜ್ಯಭಾಷೆಯಾಗಿದೆ. ರಾಜ್ಯದ ಇನ್ನೊಂದು ಪ್ರಮುಖ ಭಾಷೆಯಾದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅರಮನೆ ಮೈದಾನದಲ್ಲಿ ಶನಿವಾರ ಆರಂಭಗೊಂಡಿರುವ ‘ಬೆಂಗಳೂರು ಕಂಬಳ–ನಮ್ಮ ಕಂಬಳ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರಾತನ ಕಾಲದಿಂದ ಬಂದಿರುವ ಕಂಬಳವು ಕರಾವಳಿಯ ಜಾನಪದ ಕಲೆ. ಅದು ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ ಕಲೆಗೆ ಬೆಂಗಳೂರಿನಲ್ಲೂ ಪ್ರೋತ್ಸಾಹ ಕಲ್ಪಿಸಬೇಕು ಎಂದು ಅವಕಾಶ ನೀಡಲಾಗಿದೆ. ಪ್ರತಿವರ್ಷ ಕಂಬಳ ಮಾಡಿ ಎಂದು ಸಲಹೆ ನೀಡಿದರು.

ಕೋಣಗಳನ್ನು ಸಾಕಲು ವರ್ಷಕ್ಕೆ ₹ 15 ಲಕ್ಷ ಬೇಕು. ಇದು ಶ್ರೀಮಂತರ ಕಲೆ ಬಡವರು ಹೇಗಪ್ಪ ಸಾಕುವುದು ಎಂದು ಪ್ರಶ್ನಿಸಿದರು.

‘ತುಳುವರಿಗೆ ಭಾಷಾಭಿಮಾನ ಜಾಸ್ತಿ. ಕನ್ನಡ, ಹಿಂದಿ, ಇಂಗ್ಲಿಷ್‌ ಗೊತ್ತಿರುವ ಇಬ್ಬರು ತುಳುವರು ಸಿಕ್ಕರೆ ತುಳುವಿನಲ್ಲೇ ಮಾತು ಆರಂಭಿಸುತ್ತಾರೆ’ ಎಂದು ಶ್ಲಾಘಿಸಿದರು.

ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಮಾತನಾಡಿ, ‘ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು. 

ಬೆಂಗಳೂರಿನಲ್ಲಿ ಕಂಬಳ ಸಮುದಾಯ ಭವನ ನಿರ್ಮಾಣಕ್ಕೆ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಒದಗಿಸಬೇಕು ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ ಕುಮಾರ್ ರೈ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT