ಇವಿಸಿಎಸ್ ಸೌಲಭ್ಯ ಉದ್ಘಾಟನೆ

ಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಯ ಇಂಧನ ವಲಯದಲ್ಲಿ ಇಂಡಿಗ್ರೀನ್ ಸೌಲಭ್ಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು (ಇವಿಸಿಎಸ್) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ಉದ್ಘಾಟಿಸಿದರು.
ಇಂಡಿಯನ್ ಆಯಿಲ್ ಕಂಪನಿಯ ರಾಜ್ಯ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯಮಟ್ಟದ ಸಂಯೋಜಕ ಡಿ.ಎಲ್. ಪ್ರಮೋದ್ ಅವರ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು. ಇಂಡಿಯನ್ ಆಯಿಲ್ ಮತ್ತು ಇಂಧನ ಗ್ರಿಡ್ನ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಈವರೆಗೆ ಬೆಂಗಳೂರಿನ ವಿವಿಧ 19 ಕಡೆಗಳಲ್ಲಿ ಇವಿಸಿಎಸ್ ಮತ್ತು ಬ್ಯಾಟರಿ ಬದಲಾವಣೆ ಸೌಲಭ್ಯ ಒದಗಿಸಲಾಗಿದೆ. ಇಂಡಿಯನ್
ಆಯಿಲ್ ತನ್ನ ಹಸಿರು ಉಪಕ್ರಮದ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಈ ಹಣಕಾಸು ವರ್ಷದಲ್ಲಿ ರಾಜ್ಯದಾದ್ಯಂತ 32 ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.