3

ಫೇಸ್‌ಬುಕ್ ಪ್ರೀತಿಗೆ ಐದು ಬಾರಿ ಗರ್ಭಪಾತ!

Published:
Updated:

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಮದುವೆಯಾದ ಮಹಿಳೆಯೊಬ್ಬರು, ₹3 ಲಕ್ಷ ಕಳೆದುಕೊಳ್ಳುವುದರ ಜತೆಗೆ ಐದು ಬಾರಿ ಗರ್ಭಪಾತವನ್ನೂ ಮಾಡಿಸಿಕೊಂಡು ಈಗ ‘ಪರಿಹಾರ’ ಕೇಂದ್ರದಲ್ಲಿ ಸಾಂತ್ವನ ಪಡೆಯುತ್ತಿದ್ದಾರೆ.

2014ರಲ್ಲಿ ಆ ಯುವಕ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆತನ ಸ್ನೇಹವನ್ನು ಒಪ್ಪಿಕೊಂಡ ಸಂತ್ರಸ್ತೆ, ಸಂದೇಶ ವಿನಿಮಯ ಪ್ರಾರಂಭಿಸಿದ್ದರು. ಕೆಲ ದಿನಗಳ ಬಳಿಕ ಆತ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಅಲ್ಲದೆ, ತಾನು ಪೋಷಕರ ಜತೆ ವಿದೇಶದಲ್ಲಿ ನೆಲೆಸಿರುವುದಾಗಿ ಸುಳ್ಳು ಹೇಳಿದ್ದ.

ಪೋಷಕರ ವಿರೋಧದ ನಡುವೆಯೇ ಅದೇ ವರ್ಷ ಆತನನ್ನು ವಿವಾಹವಾದ ಸಂತ್ರಸ್ತೆ, ಬಾಡಿಗೆ ಮನೆಯಲ್ಲಿ ಹೊಸ ಜೀವನ ಪ್ರಾರಂಭಿಸಿದ್ದರು. ಈ ವೇಳೆ, ‘ವಿದೇಶದಲ್ಲಿ ಹೊಸ ಮನೆ ಕಟ್ಟುತ್ತಿದ್ದೇನೆ. ಸದ್ಯದಲ್ಲೇ ಇಬ್ಬರೂ ಅಲ್ಲಿಗೆ ಹೋಗಿಬಿಡೋಣ. ಇನ್ನು ₹3 ಲಕ್ಷ ಹೊಂದಿಸಿದರೆ ಮನೆ
ನಿರ್ಮಾಣ ಕಾರ್ಯ ಮುಕ್ತಾಯವಾಗುತ್ತದೆ’ ಎಂದಿದ್ದ. ಅದನ್ನು ನಂಬಿದ್ದ ಯುವತಿ, ಬ್ಯಾಂಕ್‌ನಿಂದ ಸಾಲ ತೆಗೆದು ಆತನಿಗೆ ಕೊಟ್ಟಿದ್ದರು.

2016ರಲ್ಲಿ ಕೇರಳದಲ್ಲಿ ಇನ್ನೊಬ್ಬ ಯುವತಿಯನ್ನು ಮದುವೆಯಾದ ಆತ, ತಿಂಗಳಲ್ಲಿ 15 ದಿನ ಇವರ ಜತೆಗೆ ಹಾಗೂ ಇನ್ನು 15 ದಿನ ಎರಡನೇ ಪತ್ನಿ ಜತೆ ಸಂಸಾರ ನಡೆಸುತ್ತಿದ್ದ. ಸಂತ್ರಸ್ತೆ ಇತ್ತೀಚೆಗೆ ಪತಿಗೆ ಕರೆ ಮಾಡಿದಾಗ, ಎರಡನೇ ಪತ್ನಿ ಕರೆ ಸ್ವೀಕರಿಸಿ ಮಲಯಾಳ ಭಾಷೆಯಲ್ಲಿ ಮಾತನಾಡಿದ್ದಾರೆ. ಅನುಮಾನಗೊಂಡ ಸಂತ್ರಸ್ತೆ, ಆ ಬಗ್ಗೆ ತಾವೇ ತನಿಖೆ ಪ್ರಾರಂಭಿಸಿದ್ದಾರೆ. ಆಗ ಪತಿ ವಿದೇಶದಲ್ಲಿಲ್ಲ. ಎರಡನೇ ಮದುವೆಯಾಗಿ ಕೇರಳದಲ್ಲೇ ನೆಲೆಸಿದ್ದಾನೆ ಎಂಬುದು ಗೊತ್ತಾಗಿದೆ.

ಖಿನ್ನತೆ

‘ಮಹಿಳೆ ಖಿನ್ನೆತೆಗೆ ಒಳಗಾಗಿದ್ದಾರೆ. ಆಪ್ತ ಸಮಾಲೋಚನೆ ಮೂಲಕ ಆಘಾತದಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದೇವೆ. ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ’ ಎಂದು ‘ಪರಿಹಾರ’ ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !