ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ: ಹೊತ್ತಿ ಉರಿದ ಹುಲ್ಲು ತುಂಬಿದ ಕ್ಯಾಂಟರ್

Published 5 ಡಿಸೆಂಬರ್ 2023, 16:29 IST
Last Updated 5 ಡಿಸೆಂಬರ್ 2023, 16:29 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಸೋಂಪುರ ಹೋಬಳಿ ಇಮಚೇನಹಳ್ಳಿ ಬಳಿ ರಾಗಿ ಹುಲ್ಲು ತುಂಬಿದ ಕ್ಯಾಂಟರ್ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಹುಲ್ಲಿನ ಸಮೇತ ಕ್ಯಾಂಟರ್ ಹೊತ್ತಿ ಉರಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಈ ಘಟನೆಯಿಂದ ಸುಮಾರು ₹ 20 ಸಾವಿರ ಬೆಲೆಯ ಹುಲ್ಲು ಹಾಗೂ ಕ್ಯಾಂಟರ್ ವಾಹನ ಸುಟ್ಟು ಕರಕಲಾಗಿದೆ.

ದಾಬಸ್ ಪೇಟೆ ಪಟ್ಟಣದ ವ್ಯಕ್ತಿಯೊಬ್ಬರು ಕರಿಮಣ್ಣೆ ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ 'ರಾಗಿ ಹುಲ್ಲು' ಖರೀದಿಸಿದ್ದರು. ಅದನ್ನು ಸ್ನೇಹಿತ ಮನ್ಸೂರ್ ಪಾಷಾ ಅವರ ಕ್ಯಾಂಟರ್ ವಾಹನದಲ್ಲಿ ಎರಡು ಟ್ರಿಪ್ ತೆಗೆದುಕೊಂಡು ಹೋಗಿದ್ದರು. ಮೂರನೇ ಟ್ರಿಪ್ ತೆಗೆದುಕೊಂಡು ಹೋಗುವ ವೇಳೆಗೆ ಈ ಅವಘಡ ಸಂಭವಿಸಿದೆ.

ಚಾಲಕ ಹುಲ್ಲು ಹೊರೆ ಬೀಳಿಸಿ, ವಾಹನ ಕಾಪಾಡುವ ಪ್ರಯತ್ನ ಮಾಡಿದರು ಫಲ ಕೊಡದೆ, ಹುಲ್ಲಿನ ಸಮೇತ ವಾಹನ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ವಾಹನ ಕಾಪಾಡಲು ಚಾಲಕ ಪ್ರಯತ್ನ ಪಟ್ಟದ್ದರಿಂದ, ತಲೆ ಕೂದಲು, ಕೈಗೆ ಸುಟ್ಟ ಗಾಯವಾಗಿದೆ. ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳು ಬಾಗಿವೆ. ಆದರೆ, ಬೆಸ್ಕಾಂ ಇಲಾಖೆ ಅವುಗಳನ್ನು ಸರಿಪಡಿಸುತ್ತಿಲ್ಲ. ಇದರಿಂದ ಈ ರೀತಿಯ ತೊಂದರೆಗಳು ಆಗುತ್ತಿವೆ. ಇನ್ನಾದರೂ ಬೆಸ್ಕಾಂ ಎಚ್ಚೆತ್ತುಕೊಂಡು ಬಾಗಿರುವ ವಿದ್ಯುತ್ ತಂತಿ ಸರಿಪಡಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT