ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹80 ಲಕ್ಷ ವಂಚನೆ: ಇಬ್ಬರ ಬಂಧನ

Published 10 ಏಪ್ರಿಲ್ 2024, 14:39 IST
Last Updated 10 ಏಪ್ರಿಲ್ 2024, 14:39 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನಗಳ ದಾಖಲಾತಿ ಸೃಷ್ಟಿಸಿಕೊಂಡು ಸಾರ್ವಜನಿಕರ ಹೆಸರಿನಲ್ಲಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಹೆಬ್ಬಾಳ ಸಮೀಪದ ಲಕ್ಷ್ಮೀಕಾಂತನಗರದ ನಿಯೊ ಜನನಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ನಂದಿನಿ (42) ಹಾಗೂ ಬೆಂಗಳೂರಿನ ಗಿಡ್ಡದಕೊಣೆಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿ ಮಂಜುನಾಥ್‌ (35) ಬಂಧಿತ ಆರೋಪಿಗಳು.

‘ಬಂಧಿತರಿಂದ ₹4 ಲಕ್ಷ ಮೌಲ್ಯದ ಕಾರು, ಸಾಲ ಪಡೆದ ಹಣದಿಂದ ಖರೀದಿಸಿದ್ದ ನಿವೇಶನದ ದಾಖಲಾತಿ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮಾಗಡಿ ರಸ್ತೆಯ ಕೆ.ಪಿ. ಅಗ್ರಹಾರದ 20ನೇ ಕ್ರಾಸ್‌ನ ನಿವಾಸಿ ಆರ್‌.ಕೆ.ಶೈಲಜಾ ಅವರು ದೂರು ನೀಡಿದ್ದರು. ಅವರ ದೂರು ಆಧರಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ನಂದಿನಿ, ಯೋಗೇಶ್‌, ಕೀರ್ತನಾ, ಪ್ರಶಾಂತ್‌, ತ್ರಿವೇಣಿ, ಮಂಜುನಾಥ್‌, ಶ್ವೇತಾಗೌಡ, ಮೋಹನ್‌ಗೌಡ, ಸಂತೋಷ್‌, ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ಹಲವರು ಹಿಂದೂಜಾ ಹೌಸಿಂಗ್ ಫೈನಾನ್ಸ್‌ನಲ್ಲಿ ₹45 ಲಕ್ಷ, ಪಿರಮಲ್‌ ಹೌಸಿಂಗ್‌ ಫೈನಾನ್ಸ್‌ನಲ್ಲಿ ₹56 ಲಕ್ಷ, ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ನಲ್ಲಿ ₹25 ಲಕ್ಷ ಸಾಲ ಪಡೆಯಲು ಯೋಜನೆ ರೂಪಿಸಿದ್ದರು. ಆದರಲ್ಲಿ ಫೈನಾನ್ಸ್ ಕಂಪನಿ ಹಾಗೂ ವೈಯಕ್ತಿಕವಾಗಿ ₹80 ಲಕ್ಷ ಸಾಲ ಪಡೆದುಕೊಂಡಿದ್ದರು. ವೈಯಕ್ತಿಕವಾಗಿ ಪಡೆದ ಹಣ ಹಾಗೂ ಫೈನಾನ್ಸ್‌ಗಳಿಂದ ಸಾಲವನ್ನು ವಾಪಸ್‌ ನೀಡಿರಲಿಲ್ಲವೆಂದು ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

ಮಂಜುನಾಥ್‌
ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT