ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಜಿರಳೆ ಔಷಧಿ ಸಿಂಪಡಣೆ- ಬಾಲಕಿ ಸಾವು

Last Updated 3 ಆಗಸ್ಟ್ 2022, 9:04 IST
ಅಕ್ಷರ ಗಾತ್ರ

ಬೆಂಗಳೂರು: ಬಾಡಿಗೆ ಮನೆಗಳಿಗೆ ಮಾಲೀಕ ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಅಸ್ವಸ್ಥಗೊಂಡ ಬಾಲಕಿ ಅಹನಾ (8) ಮಂಗಳವಾರ ಮೃತಪಟ್ಟಿದ್ದಾಳೆ. ಬಾಲಕಿಯ ತಂದೆ ವಿನೋದ್‌ ಮತ್ತು ತಾಯಿ ನಿಶಾ ‌ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿರಳೆ ಕಾಟದಿಂದ ಬೇಸತ್ತಿದ್ದ ವಸಂತನಗರದ ಮಾರಮ್ಮ ದೇವಸ್ಥಾನದ ಬಳಿಯ ಶಿವಪ್ರಸಾದ್‌ ಎಂಬುವರು ತಮ್ಮ ಕಟ್ಟಡದ ನಾಲ್ಕು ಮನೆಗಳಿಗೆ ಜಿರಳೆ ಔಷಧಿ ಸಿಂಪಡಿಸಿ, ಒಂದು ವಾರ ಮನೆ ಖಾಲಿ ಬಿಡುವಂತೆ ಬಾಡಿಗೆದಾರರಿಗೆ ಸೂಚಿಸಿದ್ದರು ಎನ್ನಲಾಗಿದೆ.

‘ಬಾಲಕಿಯ ಪೋಷಕರು ಮನೆ ಖಾಲಿ ಮಾಡಿ ನಾಲ್ಕೇ ದಿನಕ್ಕೆ ವಾಪಸಾಗಿದ್ದರು. ಮನೆಯನ್ನೂ ಸ್ವಚ್ಛಗೊಳಿಸದೆ ವಾಸ್ತವ್ಯ ಮಾಡಿದ್ದರು. ಸೋಮವಾರ ರಾತ್ರಿ ಬಾಲಕಿ ಹಾಗೂ ಪೋಷಕರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಲಕಿಯ ಮರಣೋತ್ತರ‌ ಪರೀಕ್ಷೆ ಇಂದುನಡೆಯಲಿದೆ. ಮಾಲೀಕ ಶಿವಪ್ರಸಾದ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT