ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

47 ವರ್ಷವಾದರೂ ವಸೂಲಾಗದ ರಾಜ್ಯ ಸರ್ಕಾರ ಕೊಟ್ಟಿರುವ ಸಾಲ: CAG ವರದಿಯಲ್ಲಿ ಬಹಿರಂಗ

ರಾಜ್ಯ ಸರ್ಕಾರದ ಹಣಕಾಸು ಕುರಿತ ಸಿಎಜಿ ವರದಿಯಲ್ಲಿ ಬಹಿರಂಗ
Published : 14 ಫೆಬ್ರುವರಿ 2024, 0:30 IST
Last Updated : 14 ಫೆಬ್ರುವರಿ 2024, 0:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಸರ್ಕಾರವು ತನ್ನದೇ ಅಧೀನದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೀಡಿರುವ ₹10,389.78 ಕೋಟಿ ಸಾಲ ದಶಕಗಳಿಂದಲೂ ವಸೂಲಾಗಿಲ್ಲ. ಬೆಂಗಳೂರು ಜಲಮಂಡಳಿ ಮತ್ತು ಕರ್ನಾಟಕ ಬೀಜ ನಿಗಮಕ್ಕೆ 47 ವರ್ಷಗಳ ಹಿಂದೆ ನೀಡಿದ್ದ ಸಾಲಗಳೂ ಈ ಪಟ್ಟಿಯಲ್ಲಿವೆ.

2022–23ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಲೆಕ್ಕಪತ್ರಗಳ ಕುರಿತ ಪ್ರಧಾನ ಮಹಾಲೇಖಪಾಲರ (ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಎಂಟು ಇಲಾಖೆಗಳ 21 ಸಂಸ್ಥೆಗಳಿಗೆ ನೀಡಿರುವ ಸಾಲವು ದಶಕಗಳು ಕಳೆದರೂ ಬಾಕಿ ಇದೆ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

‘ಎಂಟು ಇಲಾಖೆಗಳಿಗೆ ಸಂಬಂಧಿಸಿದ 21 ಸಂಸ್ಥೆಗಳು ಸರ್ಕಾರದಿಂದ ಪಡೆದಿದ್ದ ಸಾಲದ ಅಸಲನ್ನು ಕೂಡ ದಶಕಗಳಿಂದ ಮರುಪಾವತಿ ಮಾಡಿಲ್ಲ. ಸಾಲ ಮಂಜೂರಾತಿಯ ಸಂದರ್ಭದಲ್ಲಿ ಮರುಪಾವತಿ ಕುರಿತು ವಿಧಿಸಿದ್ದ ಷರತ್ತುಗಳನ್ನು ಪಾಲಿಸುವಲ್ಲಿ ಈ ಸಾಲಗಾರ ಸಂಸ್ಥೆಗಳು ವಿಫಲವಾಗಿವೆ’ ಎಂದು ಸಿಎಜಿ ಹೇಳಿದೆ.

ಈ ಸಾಲಗಾರ ಸಂಸ್ಥೆಗಳಿಂದ ಸರ್ಕಾರಕ್ಕೆ ₹9,380 ಕೋಟಿ ಅಸಲು ಬಾಕಿ ಇದೆ. ಚಕ್ರಬಡ್ಡಿಯೂ ಸೇರಿದರೆ ಬಾಕಿ ಮೊತ್ತವು ₹15,856 ಕೋಟಿಯಷ್ಟಾಗುತ್ತದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT