ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಹರಿದಾಸ ಉತ್ಸವ 23ರಿಂದ

Published 20 ಫೆಬ್ರುವರಿ 2024, 16:10 IST
Last Updated 20 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಸಂಗೀತ ಸಂಭ್ರಮ ಟ್ರಸ್ಟ್‌, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಹಾಗೂ ಮಲ್ಲೇಶ್ವರ ಶ್ಯಾಮಲಾ ಕೃಷ್ಣ ಸಂಗೀತ ಸಭಾ ಇದೇ 23 ರಿಂದ 25ರವರೆಗೆ ‘ಹರಿದಾಸ ಉತ್ಸವ’ ಕಾರ್ಯಕ್ರಮವನ್ನು ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರಬಯಲು ರಂಗ ಮಂಟಪದಲ್ಲಿ ನಡೆಯಲಿದೆ ಎಂದು ಬಿ.ಕೆ. ಶಿವರಾಂ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಣ್ಣಿಮೆ ಹಾಡು 188ರ ಅಂಗವಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಫೆ.23ರ ಸಂಜೆ 5ಕ್ಕೆ ಸಂಗೀತ ಶ್ರೀಕಿಷನ್ ಅವರು ಹಾಡಲಿದ್ದು, ಅವರಿಗೆ  ಪಿಟೀಲು ವಾದಕ ಆದಿತ್ಯ ಮಣಿಕರ್ಣಿಕ, ಮೃದಂಗ ವಾದಕ ಪೃಥ್ವಿ ಕಷ್ಣ ಅವರು ಸಾಥ್‌ ನೀಡಲಿದ್ದಾರೆ. ಪದ್ಮ ರಘುನಂದನ್, ಗೋದಾ ಮನು ಅವರು ಯುಗಳ ಗಾಯನ ಪ್ರಸ್ತುತ ಪಡಿಸಲಿದ್ದು, ಪಿಟೀಲು ವಾದಕ ವೆಂಕಟೇಶ ಜೋಷಿಯರ್, ಮೃದಂಗ ವಾದಕ ಜಿ.ಎಸ್. ನಾಗರಾಜ್ ಸಾಥ್‌ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಫೆ. 24ರಂದು ಸಂಜೆ 5ಕ್ಕೆ ಜೈನ್‌ ವಿಶ್ವವಿದ್ಯಾಲಯದ ಜೆ.ಕೆ. ಶ್ರೀಧರ್ ಅವರು ಪಿಟೀಲು ಹಾಗೂ ಸಾಕೇತ್‌ ಮೃದಂಗ ನುಡಿಸಲಿದ್ದಾರೆ. ಗಾಯಕ ಅದಿತಿ ಪ್ರಹ್ಲಾದ್ ಮತ್ತು ಪಿಟೀಲು ವಾದಕ ಎಂ.ಎಸ್. ಗೋವಿಂದಸ್ವಾಮಿ, ಮೃದಂಗ ವಾದಕ ಭಾಗವತ್‌ ಅವರು ಸಾಥ್‌ ನೀಡಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದರು.

ಫೆ. 25ರಂದು ಸಂಜೆ 5ಕ್ಕೆ ಸಂಗೀತ ಸಂಭ್ರಮ ಶಿಷ್ಯ ತಂಡದಿಂದ ಹರಿದಾಸ ಕೃತಿಗಳ ಗಾಯನ, ಬೆನಕ ತಂಡವು ರಂಗಗೀತೆಗಳನ್ನು ‍ಪ್ರಸ್ತುತ ಪಡಿಸಲಿದ್ದು, ಅನನ್ಯ ಭಟ್, ಲಾವಣ್ಯ ಕೃಷ್ಣಮೂರ್ತಿ, ಹರಿಣಿ ಶ್ರೀಧರ್, ನಾಗಮಣಿ ಶ್ರೀನಾಥ್ ಸಂಗೀತ ಕಛೇರಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.

ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ರಮಾ ಪುಸ್ತಕಮ್, ರೇವತಿ ಕಾಮತ್, ವೀಣಾಮೂರ್ತಿ ವಿಜಯ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT