ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಹೊಸಬರಿಗೆ ಮನ್ನಣೆ ನೀಡಿದ ಗ್ರಾಮಸ್ಥರು

Last Updated 31 ಮಾರ್ಚ್ 2021, 21:16 IST
ಅಕ್ಷರ ಗಾತ್ರ

ಹೆಸರಘಟ್ಟ: ಆಲೂರು ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು ಗ್ರಾಮಸ್ಥರು ಹೊಸಬರಿಗೆ ಮನ್ನಣೆ ನೀಡಿದ್ದಾರೆ.

22 ಸ್ಥಾನಗಳಲ್ಲಿ ಏಳು ಅವಿರೋಧ ಆಯ್ಕೆಯಾಗಿ 15 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 33 ಸದಸ್ಯರು ಚುನಾವಣಾ ಕಣದಲ್ಲಿ ಇದ್ದರು. ಆಲೂರು ಗ್ರಾಮದಲ್ಲಿ 5, ಹೆಗ್ಗಡದೇವನಪುರ ಗ್ರಾಮದಲ್ಲಿ 6 ಮತ್ತು ತಮ್ಮೇನಹಳ್ಳಿ ಗ್ರಾಮದಲ್ಲಿ ಇಬ್ಬರು ಒಟ್ಟು 13 ಸದಸ್ಯರು ಮೊದಲ ಬಾರಿ ಗೆಲುವನ್ನು ಪಡೆದಿದ್ದಾರೆ.

ತಮ್ಮೇನಹಳ್ಳಿ ಗ್ರಾಮದ ವಾರ್ಡ್ ನಂ 1 ಸಾಮಾನ್ಯವರ್ಗಕ್ಕೆ ಮೀಸಲಾಗಿತ್ತು. ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದ ವಾರ್ಡ್‍ನಲ್ಲಿ ಪರಿಶಿಷ್ಟ ಜಾತಿಯ ಎಂ. ಸವಿತಾ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಸತತವಾಗಿ ಎರಡು ಬಾರಿ ಜಯಶೀಲರಾಗಿದ್ದು 233 ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT