ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಟಿಂಗ್‌ಟನ್‌ ಆರೈಕೆಗೆ ಅತ್ಯಾಧುನಿಕ ಚಿಕಿತ್ಸಾ ಕೇಂದ್ರ

ನಗರದ 300 ಕುಟುಂಬಗಳಲ್ಲಿ ರೋಗ ಪತ್ತೆ
Last Updated 21 ನವೆಂಬರ್ 2019, 2:46 IST
ಅಕ್ಷರ ಗಾತ್ರ

ಬೆಂಗಳೂರು: ವಂಶವಾಹಿಯಾಗಿ ಮಿದುಳಿನನರಕೋಶಗಳ ಮೇಲೆ ಪರಿಣಾಮ ಬೀರುವ ಹಂಟಿಂಗ್‍ಟನ್ ರೋಗದ ಆರೈಕೆಗಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಚಿಕಿತ್ಸಾ ಕೇಂದ್ರವನ್ನು ನಗರದ ವಿಕ್ರಂ ಆಸ್ಪತ್ರೆ ಆರಂಭಿಸಿದೆ.

‘ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ರೋಗ ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿಸುಮಾರು 250ರಿಂದ 300 ಕುಟುಂಬಗಳು ಹಂಟಿಂಗ್‍ಟನ್ ಕಾಯಿಲೆ ಹೊಂದಿರು ವುದಾಗಿ ಗುರುತಿಸಲಾಗಿದೆ’ ಎಂದು ವಿಕ್ರಂ ಆಸ್ಪತ್ರೆಯ ಚಲನೆ ತೊಂದರೆಗಳ ವಿಶೇಷ ಸಲಹಾ ತಜ್ಞ ಎಲ್.ಕೆ.ಪ್ರಶಾಂತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಂಟಿಂಗ್‍ಟನ್ ಒಂದು ವಂಶ ವಾಹಿ ಸಂಬಂಧ ತೊಂದರೆ. ಖಿನ್ನತೆ, ಆತಂಕ, ಆತ್ಮಹತ್ಯಾ ಚಿಂತನೆ, ಚಲ ನೆಯ ತೊಂದರೆ, ಗ್ರಹಿಕಾ ಶಕ್ತಿ ಕುಂದು ವುದುರೋಗದ ಕೆಲವು ಲಕ್ಷಣಗಳು. ಸಾಮಾನ್ಯವಾಗಿ 40 ವರ್ಷ ವಯೋಮಾನದವರಲ್ಲಿ ಕಂಡುಬರುತ್ತಿತ್ತು. ಆದರೆ, 20ರಿಂದ 30 ವಯೋಮಾನದವರಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಇದು ವರ್ಗಾವಣೆಯಾಗುತ್ತಿದೆ. ರಕ್ತ ಪರೀಕ್ಷೆ ಮೂಲಕಇದನ್ನು ಶಿಶುವಿನ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಮಗುವನ್ನು ಹಂಟಿಂಗ್‍ಟನ್‌ನಿಂದ ತಪ್ಪಿಸಬಹುದು’ ಎಂದರು.

ಮನಃಶಾಸ್ತ್ರಜ್ಞ ಸಲಹಾ ತಜ್ಞ ಆನಂದ ಜಯರಾಮನ್,‘ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ವಿದೇಶಗಳಿಗೆ ಹೋಗುತ್ತಾರೆ. ಇನ್ನು ಮುಂದೆ ವಿಕ್ರಂ ಆಸ್ಪತ್ರೆಯಲ್ಲೇ ಅತ್ಯಾಧುನಿಕ ಚಿಕಿತ್ಸೆ ಪಡೆದುಕೊಳ್ಳಬಹುದು. ಪ್ರತಿ ತಿಂಗಳ 4ನೇ ಬುಧವಾರದಂದು ವೈದ್ಯರು ಹಂಟಿಂಗ್‌ಟನ್‌ ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT