‘ಭಾರತೀಯ ಸಂಸ್ಕೃತಿ ಶ್ರೇಷ್ಠ’

7

‘ಭಾರತೀಯ ಸಂಸ್ಕೃತಿ ಶ್ರೇಷ್ಠ’

Published:
Updated:
Deccan Herald

ಕೆ.ಆರ್‌.ಪುರ: ದೇಶ ಇಂದಿಗೂ ಅತ್ಯಂತ ತಾರುಣ್ಯದಲ್ಲಿ ಇರುವುದಕ್ಕೆ ಭಾರತೀಯ ಸಂಸ್ಕೃತಿಯೇ ಕಾರಣ ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಅವರು ಹೇಳಿದರು.

ಕೆ.ಆರ್‌.ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾವೇಶ ‘ಕಲ್ಚರ್-ಯೂತ್ ಅಂಡ್ ಫ್ಯೂಚರ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಿಗೂ ಪ್ರಾಣಿಗಳಿಗೂ ಜೈವಿಕವಾಗಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಮನುಷ್ಯನನ್ನು ಪ್ರಾಣಿಗಳಿಗಿಂತ ಭಿನ್ನವಾಗಿಸುವುದು ಅವನ ಚಿಂತನಾ ಶಕ್ತಿ ಮಾತ್ರ. ನಾವು ಭಾರತೀಯತೆಯನ್ನು ತ್ಯಾಗ ಮತ್ತು ಸೇವೆಯ ಪ್ರತೀಕವಾಗಿ ನೋಡಬೇಕಾಗುತ್ತದೆ. ತ್ಯಾಗವೆಂದರೆ ಕೇವಲ ಸನ್ಯಾಸಿಯಾಗಿ ಎಲ್ಲರಿಂದ ಮುಕ್ತವಾಗುವುದಲ್ಲ. ಬದಲಿಗೆ ಸ್ವಾರ್ಥವನ್ನು ತೊರೆದು ಮನುಜ ಸೇವೆಗೆ ನಿಲ್ಲುವುದೇ ಆಗಿದೆ’ ಎಂದರು.

ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಎಚ್.ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.  ಐಸಿಸಿಆರ್‌ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ವೇಣುಗೋಪಾಲ್, ಇಂಡೋ ಇಸ್ರೇಲಿ ಫ್ರೆಂಡ್‌ಷಿಪ್‌ ಸೊಸೈಟಿಯ ಅಧ್ಯಕ್ಷ ಡಾ.ಆಸಿಫ್ ಇಕ್ಬಾಲ್, ಡಾ.ವಿನೊಯ್ ಸಿಂಗ್, ಸಿಯಾರಾಂ ಸಿಂಗ್ ಇದ್ದರು.

ಬರಹ ಇಷ್ಟವಾಯಿತೆ?

  • 2

    Happy
  • 2

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !