ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಲೋಕಸೇವಾ ಆಯೋಗ: ಮುಂದುವರಿದ ಜಟಾಪಟಿ

Published 12 ಜನವರಿ 2024, 16:08 IST
Last Updated 12 ಜನವರಿ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಯ ಮಧ್ಯದ ಜಟಾಪಟಿ ಮುಂದುವರಿದಿದೆ. ಕಾನೂನು ಕೋಶದ ಮುಖ್ಯಸ್ಥರ ನೇಮಕಕ್ಕೆ ಕಾರ್ಯದರ್ಶಿ ಹೊರಡಿಸಿದ್ದ ಹೊಸ ಅಧಿಸೂಚನೆಯನ್ನು ಆಯೋಗವು ಶುಕ್ರವಾರ ರದ್ದುಗೊಳಿಸಿದೆ.

ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ ಎಂಬ ತಕರಾರಿನೊಂದಿಗೆ ನವೆಂಬರ್‌ 15ರ ಅಧಿಸೂಚನೆಯನ್ನೇ ರದ್ದುಗೊಳಿಸಿ ಆಯೋಗದ ಕಾರ್ಯದರ್ಶಿ ಜನವರಿ 9ರಂದು ಅಧಿಸೂಚನೆ ಹೊರಡಿಸಿದ್ದರು. ಶುಕ್ರವಾರ ಸಭೆ ನಡೆಸಿರುವ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಮತ್ತು ಸದಸ್ಯರು, ಜ.9ರಂದು ಕಾರ್ಯದರ್ಶಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.

ಆಯೋಗದ ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿಗೆ 2023ರ  ನವೆಂಬರ್‌ 11ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ತಂಡವೊಂದು ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ನೇಮಕಾತಿಗೆ ಶಿಫಾರಸು ಮಾಡಿತ್ತು. ಅದಕ್ಕೆ ಕಾರ್ಯದರ್ಶಿ ತಕರಾರು ಎತ್ತಿದ್ದರು.

‘ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿಗೆ ನವೆಂಬರ್‌ 15ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲು ಆಯೋಗದ ನಿರ್ಣಯವಿಲ್ಲದೇ, ಆಯೋಗದ ಗಮನಕ್ಕೆ ತಾರದೇ ಕಾರ್ಯದರ್ಶಿಯವರು ಮಂಗಳವಾರ ಅಧಿಸೂಚನೆ ಹೊರಡಿಸಿದ್ದರು. ಕ್ರಮಬದ್ಧವಾಗಿಲ್ಲದ ಕಾರಣದ ಅದನ್ನು ರದ್ದುಪಡಿಸಲು ಆಯೋಗವು ನಿರ್ಣಯ ಕೈಗೊಂಡಿದೆ’ ಎಂದು ಶಿವಶಂಕರಪ್ಪ ಸಾಹುಕಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT