ಗುರುಪಾದ ಮರಿಗುದ್ದಿ ಅವರ ಕೃತಿಗೆ ‘ಕಾವ್ಯಾನಂದ ಪುರಸ್ಕಾರ’

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ವತಿಯಿಂದ ನೀಡಲಾಗುವ 2019–20 ‘ಕಾವ್ಯಾನಂದ ಪುರಸ್ಕಾರ’ವು ಗುರುಪಾದ ಮರಿಗುದ್ದಿ ಅವರ ‘ಪೊದೆಯಿಂದಿಳಿದ ಎದೆಯ ಹಕ್ಕಿ’ ಕೃತಿಗೆ ದೊರೆತಿದೆ.
ಡಾ.ಸಿದ್ಧಯ್ಯ ಪುರಾಣಿಕರ ಕಾವ್ಯನಾಮವಾಗಿರುವ ‘ಕಾವ್ಯಾನಂದ’ ಹೆಸರಿನಲ್ಲಿ ನೀಡಲಾಗುವ ಪುರಸ್ಕಾರವು ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
2023ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ವಿಜಯಾ ನಂದೀಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.