ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ಕ್ಕೆ ಕೋಟೆ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ

Published 15 ಮೇ 2024, 16:07 IST
Last Updated 15 ಮೇ 2024, 16:07 IST
ಅಕ್ಷರ ಗಾತ್ರ

ಕೆ.ಆರ್.ಪುರ: ಇತಿಹಾಸ ಪ್ರಸಿದ್ಧ ಕೋಟೆ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಮೇ 18ರಂದು ಜರುಗಲಿದೆ.

ಮಂಗಳವಾರ ವೆಂಕಟರಮಣಸ್ವಾಮಿಗೆ ಅಭಿಷೇಕ, ರಕ್ಷಾಬಂಧನ ಕಳಶ ಸ್ಥಾಪನೆ, ಯಾಗಶಾಲಾ ಪ್ರವೇಶ, ಅಂಕುರಾರ್ಪಣ, ಧ್ವಜಾರೋಹಣ, ಕಲಶಾರ್ಚನೆ ನಡೆಯಿತು. ಬುಧವಾರ ಅಭಿಷೇಕ, ಪೂಜೆ, ಹೋಮ, ಹವನ, ಹೂವಿನ ಅಲಂಕಾರ ಮಹಾಮಂಗಳಾರತಿ ನಡೆದವು.

ಮೇ 16ರಂದು ಅಭಿಷೇಕ, ಗರುಡೋತ್ಸವ, ಮೇ 17ರಂದು ಅಭಿಷೇಕ, ಪೂಜೆ, ಹೋಮ ಹವನ, ಹೂವಿನ ಅಲಂಕಾರ ಗಜೇಂದ್ರ ಮೋಕ್ಷ ಕಾರ್ಯಕ್ರಮ ನಡೆಯಲಿದೆ.

ಶನಿವಾರ ಮಂಗಳ ವಾದ್ಯ, ತಮಟೆವಾದ್ಯ, ವೀರಗಾಸೆ, ಪೂಜಾ ಕುಣಿತ, ಕೀಲು ಕುದುರೆ ಸಕಲ ವಾದ್ಯಗಳೊಂದಿಗೆ ಸಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ. ಕೆ.ಆರ್. ಪುರ ಸುತ್ತಮುತ್ತಲಿನ ಭಾಗದ ಗ್ರಾಮಸ್ಥರು ಪಾಲ್ಗೊಳ್ಳುವರು ಎಂದು ದೇವಸ್ಥಾನದ ಅಧ್ಯಕ್ಷ ಎಲ್.ಮುನಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT