ಖಾಸಗಿ ಬಸ್‌ಗಳಿಗಾಗಿ ಪೀಣ್ಯದಲ್ಲಿ ಪ್ರಯಾಣಿಕರ ಪರದಾಟ

7

ಖಾಸಗಿ ಬಸ್‌ಗಳಿಗಾಗಿ ಪೀಣ್ಯದಲ್ಲಿ ಪ್ರಯಾಣಿಕರ ಪರದಾಟ

Published:
Updated:

ಬೆಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿಯ ಪೀಣ್ಯ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಬಸ್‌ ನಿಲ್ದಾಣಗಳಿಗೆ ಬರಬೇಕಾಗಿದ್ದ ಖಾಸಗಿ ಬಸ್‌ಗಳು ರಾತ್ರಿ 8ರ ನಂತರ ಕೆಎಸ್ಆರ್‌ಟಿಸಿ ಅಧಿಕಾರಿಗಳ ಆದೇಶದಂತೆ ಗೊರಗುಂಟೆಪಾಳ್ಯ ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. ರಾಜ್ಯದ ವಿವಿಧ ಭಾಗಗಳಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವವರು ಪಾರ್ಲೆಜಿ ಫ್ಯಾಕ್ಟರಿ ಬಳಿ ಇರುವ ಟೋಲ್ ಗೇಟ್‌ ಬಳಿ ಹೋಗಿ ಹತ್ತಬೇಕಾಗಿದೆ.

ಕಳೆದ ನಾಲ್ಕೈದು ತಿಂಗಳಿಂದ ವೃದ್ಧರು, ಮಹಿಳೆಯರು, ಮಕ್ಕಳು, ಅಂಗವಿಕಲರು ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್‌ ರಸ್ತೆಯ ಮಧ್ಯೆ ಇರುವ ತಡೆಗೋಡೆಯನ್ನು ದಾಟಿ ಬಸ್ ಹತ್ತುವ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಸ್ಥಳದಲ್ಲಿ ಸಾರಿಗೆ ಸಂಸ್ಥೆ ಯಾವುದೇ ಮೂಲಸೌಕರ್ಯಗಳನ್ನು ಒದಗಿಸಿಲ್ಲ' ಎಂದು ಪವರ್ ಫ್ರೆಂಡ್ಸ್, ಬೆಂಗಳೂರು ಸಂಸ್ಥೆಯ ಅಧ್ಯಕ್ಷ ಶಿವಾನಂದ ಸಾಲಿಯಾನ್ ಹೇಳಿದರು.

ಈ ಬಗ್ಗೆ ಸಂಸ್ಥೆಯವರು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರ ಸಮಸ್ಯೆ ಪರಿಹಾರಕ್ಕಾಗಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಸಾರ್ವಜನಿಕರಿಗೆ ಆಗುವ ಅನನುಕೂಲಗಳನ್ನು ಸರಿಪಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಶಿವಾನಂದ ಸಾಲಿಯಾನ್‌ ಅವರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !